ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಮುದ್ರದ ಒಡಲು ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ "ತಾತ್ಕಾಲಿಕ ಪರಿಹಾರ" ಹೀಗಿದೆ

ಉಡುಪಿ: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಸ್ತುಗಳು ನದಿ ಮತ್ತು ಸಮುದ್ರ ಪಾಲಾಗುತ್ತಿದ್ದು ಈ ಸಮಸ್ಯೆ ಹತೋಟಿಗೆ ಬರುತ್ತಿಲ್ಲ. ಈ ನಡುವೆ ಸಮುದ್ರಪಾಲಾಗುವ ಕಸದ ಸಮಸ್ಯೆಗೆ ಎನ್ ಜಿಓ ಸಂಸ್ಥೆಯೊಂದು ಪರಿಹಾರ ಹುಡುಕುವ ಪ್ರಯತ್ನ ಮಾಡಿದೆ.

ಸಾಹಸ್ ಎಂಬ ಎನ್ ಜಿಓ ಸಂಸ್ಥೆ ರಬ್ಬರ್ ನ ಬ್ಯಾರಿಕೇಡ್ ತೋಡಿಗೆ ಅಡ್ಡಲಾಗಿ ಹಾಕುವ ಮೂಲಕ ಪ್ಲಾಸ್ಟಿಕ್ ಕಸವನ್ನು ಮುಂದೆ ಹೋಗದಂತೆ ತಡೆದು ಅದನ್ನು ಮರುಬಳಕೆ ಕಾರ್ಖಾನೆಗೆ ನೀಡುವ ಕಾರ್ಯ ಮಾಡುತ್ತಿದೆ. ಈ ಬೃಹತ್ ತೋಡಿನಲ್ಲಿ ತೆರೆದ ಪೈಪ್ ಗಳ ಮೂಲಕ ನೇರವಾಗಿ ನಗರದ ಎಲ್ಲಾ ಖಾಸಗಿ ಕಟ್ಟಡಗಳ ತ್ಯಾಜ್ಯ ನೀರು, ಕಸ ಎಲ್ಲವನ್ನೂ ಈ ತೋಡಿಗೆ ಬಿಡಲಾಗುತ್ತಿದೆ.

ಹೀಗಾಗಿ ಈ ತೋಡಿನಲ್ಲಿ ‌ನದಿ ನೀರಿನ ಬದಲು ತ್ಯಾಜ್ಯ ನೀರು ,ಮಳೆ ನೀರಿನ ಜೊತೆಗೆ ಹರಿದು ಸಮುದ್ರ ಸೇರುತ್ತಿದೆ. ಸಾಹಸ್ ಎನ್ ಜಿಓದ ಹೊಸ ಐಡಿಯಾದಿಂದಾಗಿ ಒಂದು ಹಂತಕ್ಕೆ ಪ್ಲಾಸ್ಟಿಕ್ ಸಮುದ್ರದ ಒಡಲು ಸೇರುವ ಬದಲು ಇಲ್ಲೇ ನಿಲ್ಲುತ್ತದೆ.ಅದನ್ನು ಮರುಬಳಕೆಗೆ ನೀಡುವುದರಿಂದ ಪರಿಸರಕ್ಕೂ ಲಾಭ ಮರುಬಳಕೆ ದೃಷ್ಟಿಯಿಂದಲೂ ಲಾಭದಾಯಕ. ನಿಜಕ್ಕೂ ಇದೊಂದು ಉತ್ತಮ ಸೇವಾಕಾರ್ಯ ಅಲ್ಲವೇ?

Edited By : Somashekar
PublicNext

PublicNext

18/09/2024 12:45 pm

Cinque Terre

20.75 K

Cinque Terre

1

ಸಂಬಂಧಿತ ಸುದ್ದಿ