ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ತೆ ದ್ವೀಪ ಅಗೆದು ಮರಳುಗಾರಿಕೆ - ಗ್ರಾಮಸ್ಥರಿಂದ ಪ್ರತಿಭಟನೆ

ಮಂಗಳೂರು: ನಗರದ ಪಾವೂರು ಉಳಿಯದಲ್ಲಿ ಮರಳು ಮಾಫಿಯಾ ಸಕ್ರಿಯವಾಗಿದ್ದು, ಮತ್ತೆ ದ್ವೀಪ ಅಗೆತ ಶುರುವಾಗಿದೆ‌. ಆದ್ದರಿಂದ ಮರಳು ಮಫಿಯಾ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ.

ಪಾವೂರು-ಉಳಿಯ ದ್ವೀಪವನ್ನು ಅಕ್ರಮ ಮರಳುಗಾರರಿಂದ ರಕ್ಷಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. 'ಒಂದೋ ಬದುಕಿಸಿ ಇಲ್ಲವೇ ಸಾಯಿಸಿ' ಎಂಬ ಮನವಿಯೊಂದಿಗೆ ಪ್ರತಿಭಟನೆ ನಡೆದಿದೆ. ಮಾನವ ಸರಪಳಿ ಸಂದರ್ಭ ಪಾವೂರು ಉಳಿಯ ನಿವಾಸಿಗಳು ನದಿಯಲ್ಲಿ ಮುಳುಗಿ ಪ್ರತಿಭಟನೆ ನಡೆಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ತಡೆಯಲು ವಿಫಲವಾದ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಡಿಸಿದರು‌. ಪ್ರತಿಭಟನೆ ವೇಳೆ ಜಿಲ್ಲಾಡಳಿತ, ಗಣಿ ಇಲಾಖೆಯ ವಿರುದ್ಧ‌ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ಲೇಕಾರ್ಡ್ ಗಳನ್ನು ಹಿಡಿದು ನೀರಿಗಿಳಿದು ಮಹಿಳೆಯರು ಪ್ರತಿಭಟನೆ ನಡೆಸಿದರು.

Edited By : Manjunath H D
PublicNext

PublicNext

15/09/2024 03:27 pm

Cinque Terre

29.35 K

Cinque Terre

0

ಸಂಬಂಧಿತ ಸುದ್ದಿ