ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆನ್ ಲೈನ್ ಫ್ರಾಡ್ - ಷೇರು ಮಾರುಕಟ್ಟೆಯಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ 17 ಲಕ್ಷ ರೂ ವಂಚನೆ

ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಜಿಬೆಟ್ಟುವಿನ ಅಶ್ವಿನ್ ಕಾಮತ್(42) ಎಂಬವರನ್ನು ಅಪರಿಚಿತರು ವಾಟ್ಸಾಪ್ ಗ್ರೂಪಿಗೆ ಸೇರಿಸಿದ್ದು, ಗ್ರೂಪಿನಲ್ಲಿ ಅವರಿಗೆ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಂತರ ಅವರು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು ಅದರಂತೆ ಅಶ್ವಿನ್ ಕಾಮತ್, ಮಾರ್ಚ್ 13ರಿಂದ ಜೂನ್ 3ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17,89,001ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಅದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

18/09/2024 07:23 pm

Cinque Terre

2.23 K

Cinque Terre

0

ಸಂಬಂಧಿತ ಸುದ್ದಿ