ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಣ್ಣಹಾವು ಎಂಬ ನಿರ್ಲಕ್ಷ್ಯ ಬೇಡ, ಅದೇ ಡೇಂಜರಸ್ - ಉರಗರಕ್ಷಕ ಭುವನ್ ದೇವಾಡಿಗ

ಮಂಗಳೂರು: ಹೆಬ್ಬಾವಿನ ಮರಿಯೆಂದು ಭ್ರಮಿಸಿ ಕನ್ನಡಿ ಹಾವಿನ ಮರಿಯನ್ನು ಹಿಡಿದಿದ್ದ ರಾಮಚಂದ್ರ ಪೂಜಾರಿಯವರ ಜೀವಕ್ಕೇ ಎರವಾದ ಘಟನೆ ಇತ್ತೀಚಿಗೆ ನಡೆದಿದೆ. ನಗರದ ಮರವೂರಿನ ಮನೆಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಇವರು ಸೆ.4ರಂದು ಹೆಬ್ಬಾವಿನ ಮರಿಯೆಂದು ಕನ್ನಡಿ ಹಾವನ್ನು ಹಿಡಿದಿದ್ದರು. ಈ ವೇಳೆ ಹಾವಿನ ಮರಿ ಅವರಿಗೆ ಕಚ್ಚಿತ್ತು.

ಆದರೆ ಅವರು ವಿಷರಹಿತ ಹಾವೆಂದು ನಿರ್ಲಕ್ಷಿಸಿ ಚಿಕಿತ್ಸೆಯನ್ನೂ ಮಾಡಿರಲಿಲ್ಲ‌. ಆದರೆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಉರಗರಕ್ಷಕ ಭುವನ್ ದೇವಾಡಿಗ ಪಬ್ಲಿಕ್ ನೆಕ್ಸ್ಟ್‌ನೊಂದಿಗೆ ಮಾತನಾಡಿ, ಸಣ್ಣ ಹಾವೆಂಬ ನಿರ್ಲಕ್ಷ್ಯ ಬೇಡ. ಸಣ್ಣ ಹಾವುಗಳೇ ಅತೀ ಡೇಂಜರಸ್‌. ಅದಕ್ಕೆ ತಮ್ಮ ಬಾಯಿ, ವಿಷದ ಮೇಲೆ ನಿಯಂತ್ರಣವಿರುವುದಿಲ್ಲ. ಯಾವ ಹಾವೆಂದು ಗೊತ್ತಿಲ್ಲದಿದ್ದರೆ, ಅದನ್ನು ಹಿಡಿಯುವ ಸಾಹಸಕ್ಕೆ ಕೈಹಾಕದೆ, ಅರಣ್ಯ ಇಲಾಖೆಗೆ ಅಥವಾ ಉರಗರಕ್ಷಕರಿಗೆ ಕರೆ ಮಾಡಿ ಅವರಿಂದಲೇ ಹಾವನ್ನು ತೆರವು ಮಾಡಿಸಿ ಎಂದಿದ್ದಾರೆ.

Edited By : Manjunath H D
PublicNext

PublicNext

14/09/2024 10:33 pm

Cinque Terre

79.23 K

Cinque Terre

5

ಸಂಬಂಧಿತ ಸುದ್ದಿ