ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಮಾನವ ಸರಪಳಿ-ಸಾರ್ವಜನಿಕರಿಗೆ ಸೂಚನೆ

ಮಂಗಳೂರು:ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಮುಲ್ಕಿ ಹೆಜಮಾಡಿ ಟೋಲ್‌ಗೇಟ್ ನಿಂದ ಸುಳ್ಯ ಸಂಪಾಜೆ ಗೇಟ್‌ವರೆಗೆ ನಡೆಯುವ ಮಾನವ ಸರಪಳಿಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾಡಳಿತವು ಕೆಲವು ಸೂಚನೆಗಳನ್ನು ನೀಡಿದೆ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿ.ಮೀ. ವರೆಗೆ ಸಾಗಲಿರುವ ಈ ಮಾನವ ಸರಪಳಿ ಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವ ಹಿಸಲಿದ್ದಾರೆ. ಮುಲ್ಕಿ-ಸುರತ್ಕಲ್-ಬೈಕಂಪಾಡಿ- ನಂತೂರು-ಪಡೀಲ್-ಬಿ.ಸಿ.ರೋಡ್-ಪುತ್ತೂರು-

ಸುಳ್ಯ ಮಾರ್ಗದಲ್ಲಿ ಮಾನವ ಸರಪಳಿ ಸಾಗಲಿದೆ.

ರವಿವಾರ ಬೆಳಗ್ಗೆ 9:30ರಿಂದ 9:37ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲಬೇಕು. 9:37ರಿಂದ 9:40ರವರೆಗೆ ನಾಡಗೀತೆ, 9:41ರಿಂದ 9:55ರವರೆಗೆ ಅತಿಥಿಗಳಿಂದ ಭಾಷಣ, 9:55ರಿಂದ 9:57ರವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು, 9:57ರಿಂದ 9:59ರವರೆಗೆ ಮಾನವ ಸರಪಳಿ ಯಲ್ಲಿ ಕೈ ಕೈ ಹಿಡಿದು ನಿಲ್ಲುವುದು. ಬೆಳಗ್ಗೆ 10ಕ್ಕೆ ಮಾನವ ಸರಪಳಿಯಲ್ಲೇ ತಮ್ಮ ಎರಡು ಕೈಗಳನ್ನು ಮೇಲೆತ್ತಿ 'ಜೈ ಹಿಂದ್, ಜೈ ಕರ್ನಾಟಕ' ಘೋಷಣೆ ಕೂಗಿ ಸರಪಳಿ ಯನ್ನು ಕಳಚಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

14/09/2024 01:42 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ