ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಸಾಧನೆಯಿಂದ ಯಶಸ್ಸು ಸಾದ್ಯ

ಮುಲ್ಕಿ:ವಿದ್ಯಾರ್ಥಿಗಳಿಗೆ ಎಸ್‌ ಎಸ್‌ ಎಲ್‌ ಸಿ ಜೀವನದ ಪ್ರಮುಖ ಮೆಟ್ಟಲಾಗಿದ್ದು ಕಠಿಣ ಪರಿಶ್ರಮ ಹಾಗೂ ಸಾಧನೆಯಿಂದ ಯಶಸ್ಸು ಸಾದ್ಯ ಎಂದು ಮುಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಪ್ರೊ| ಸ್ಯಾಮ್ ಮಾಬೆನ್‌ ಹೇಳಿದರು.

ಅವರು ಕಾಲೇಜಿನಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗಾಗಿ ನಡೆದ ಓರಿಯೆಂಟೇಶನ್‌ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸುಮಾರು 10ಕ್ಕೂ ಹೆಚ್ಚು ಶಾಲಾ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಡಾ| ಮಿಥುನ್, ಅಸಿಸ್ಟೆಂಟ್ ಪ್ರೊಫೆಸರ್, ಕೆ.ಎಂ.ಸಿ., ಮಂಗಳೂರು ,ಹಾಲಪ್ಪ ಗುರುವಪ್ಪನವರ್, ಡಾಟಾ ಸೈನ್ಸ್ ಪ್ರೊಜೆಕ್ಟ್ ಮ್ಯಾನೇಜರ್, ಕಾಗ್ನಿಝೆಂಟ್‌ಟೆಕ್ನೊಲಾಜಿ, ಬೆಂಗಳೂರು ,ಗೌತಮ್ ಭಂಡಾರಿ, ಎಂಜಿನಿಯರಿಂಗ್ ಮ್ಯಾನೇಜರ್, ಇಂಡೇವರ್ ಸರ್ವಿಸಸ್ ಪ್ರೆ.. ಲಿ.ಇವರು ತಮ್ಮ ಕಾಲೇಜು ಜೀವನದ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಮಣಿ ಶೆಟ್ಟಿ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪಮೀದ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಶೈಲಜಾ ವೈ. ವಿ. ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ| ವೆಂಕಟೇಶ್ ಭಟ್‌ ಕಾರ್ಯಕ್ರಮವನ್ನು ಸಂಯೋಜಿಸಿದ್ದು ಕು| ಮೋಕ್ಷ ಸ್ವಾಗತಿಸಿದರು, ಕು| ದಶಮಿ ವಂದಿಸಿದರು. ಕು| ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

17/09/2024 09:14 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ