ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಊಟ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ

ಮುಂಬೈ: ಊಟ ನೀಡಲು ನಿರಾಕರಿಸಿದ್ದಕ್ಕೆ ಚಾಲಕನೋರ್ವ ಮದ್ಯದ ಅಮಲಿನಲ್ಲಿ ಹೋಟೆಲ್‌ವೊಂದಕ್ಕೆ ಲಾರಿ ನುಗ್ಗಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಲಕನು ಸೋಲಾಪುರದಿಂದ ಪುಣೆ ಕಡೆಗೆ ಲಾರಿ ಸಾಗಿಸುತ್ತಿದ್ದ. ಮಾರ್ಗಮಧ್ಯದಲ್ಲಿ ಆತ ಹೋಟೆಲ್‌ವೊಂದರ ಬಳಿ ಲಾರಿ ನಿಲ್ಲಿಸಿ ಊಟ ಕೇಳಿದ್ದಾನೆ. ಆದರೆ ಹೋಟೆಲ್ ಮಾಲೀಕ ಆತನಿಗೆ ಊಟ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಮೊದಲೇ ಮದ್ಯ ಸೇವಿಸಿ ಅಮಲಿನಲ್ಲಿದ್ದ ಆತ ಸಿಟ್ಟಿಗೆದ್ದು ಲಾರಿಯನ್ನು ಹೋಟೆಲ್‌ಗೆ ನುಗ್ಗಿಸಿದ್ದಾನೆ. ಇದರಿಂದ ಕೆರಳಿದ ಹೋಟೆಲ್ ಸಿಬ್ಬಂದಿ ಲಾರಿಗೆ ಕಲ್ಲಿನಿಂದ ಹೊಡೆಯಲು ಪ್ರಾರಂಭಿದ್ದರು. ಆದರೂ ಕೂಡ ಲಾರಿ ಚಾಲಕ ನಿಲ್ಲಿಸದೆ ಲಾರಿ ಚಲಾಯಿಸಿ ಹಾನಿಗೊಳಿಸಿದ್ದಾನೆ. ಲಾರಿ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್‌ನ ಮುಂಭಾಗಕ್ಕೆ ಹಾನಿಯಾಗಿದ್ದು, ಹೋಟೆಲ್ ಆವರಣದಲ್ಲಿ ನಿಂತಿದ್ದ ಕಾರೊಂದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Edited By : Vijay Kumar
PublicNext

PublicNext

07/09/2024 10:16 pm

Cinque Terre

165.79 K

Cinque Terre

2

ಸಂಬಂಧಿತ ಸುದ್ದಿ