ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅರಳಿಕಟ್ಟಿ ಓಣಿಯಲ್ಲಿ ಮುಸ್ಲಿಂ ಯುವಕರಿಂದ ಗಣಪತಿಯ ಪೂಜೆ

ಹುಬ್ಬಳ್ಳಿ: ಇಂದು ದೇಶಾದ್ಯಂತ ಗಣೇಶ್ಯೋತ್ಸವವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಹಿಂದೂಗಳು ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಣೆ ಮಾಡುತ್ತಾರೆ. ಆದ್ರೆ ಹುಬ್ಬಳ್ಳಿಯಲ್ಲಿ ಇಂದು ಈ ಹಬ್ಬವನ್ನು ಮುಸ್ಲಿಂ ಯುವಕರು ಸೇರಿ ಗಣೇಶ್ಯೋತ್ಸವವನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ತಂದು ಹಬ್ಬವನ್ನು ಆಚರಣೆ ಮಾಡಿದರು.

ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿನ ಅರಳಿಕಟ್ಟಿ ಓಣಿಯಲ್ಲಿ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವಕರೆಲ್ಲ ಸೇರಿ ಒಟ್ಟಿಗೆ ಸೇರಿ ಗಣಪತಿ ಮೂರ್ತಿಯನ್ನು ಪೂಜೆ ಮಾಡುವುದರ ಮೂಲಕ ನಾವೆಲ್ಲ ಒಂದೇ ಎಂಬ ಮಂತ್ರವನ್ನು ಜಪಿಸಿದರು. ಈ ಅರಳಿಕಟ್ಟಿ ಏರಿಯಾದಲ್ಲಿ ಹಿಂದೂ, ಮುಸ್ಲಿಂ, ಹಾಗೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ವಾಸವಿದ್ದಾರೆ. ಹೀಗಾಗಿ ನಾವು ಯಾವತ್ತಿಗೂ ಜಾತಿ ಬೇಧವನ್ನು ಮಾಡಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಈ ಹಬ್ಬ ಆಚರಣೆ ಮಾಡಲಾಗುತ್ತಿದೆ ಅಂತಾರೇ ಅರಳಿಕಟ್ಟಿ ಓಣಿಯ ಸ್ಥಳೀಯರು.

ಈದ್ಗಾ ಮೈದಾನದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೇ ಸಂಬಂಧಿಸಿದಂತೆ ಇಡೀ ದೇಶ್ಯಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲಿಗ ನಾವೆಲ್ಲರೂ ಒಂದೇ ಎಂಬ ಗಾಳಿ ಬೀಸಲಾರಂಭಿಸಿದ್ದು ಇದಕ್ಕೆ ಉದಾರಣೆ ಆಗಿದ್ದು ಈ ಅರಳಿಕಟ್ಟಿ ಓಣಿಯ ಗಣಪ ಅಂದ್ರೆ ತಪ್ಪಾಗಲಾರದು.

Edited By : Nagesh Gaonkar
Kshetra Samachara

Kshetra Samachara

07/09/2024 10:08 pm

Cinque Terre

39.07 K

Cinque Terre

6

ಸಂಬಂಧಿತ ಸುದ್ದಿ