ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿಯಲ್ಲಿ ಈದ್ ಮಿಲಾದ್ ಆಚರಣೆ - ಎಲ್ಲರ ಗಮನ ಸೆಳೆದ ಮದರಸಾ ಮಕ್ಕಳು

ಕಲಘಟಗಿ :ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಲಘಟಗಿ ಪಟ್ಟಣದಲ್ಲಿ ಮುಸಲ್ಮಾನ್ ಬಾಂಧವರು ವಿಜೃಂಭಣೆಯಿಂದ ಹಬ್ಬ ಆಚರಿಸಿದರು.

ಈ ಸಂಧರ್ಭದಲ್ಲಿ ಮದರಸಾ ಮಕ್ಕಳು ಪಾದಯಾತ್ರೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣದ ಹಲವು ಬೀದಿಗಳಲ್ಲಿ ಎಲ್ಲರ ಗಮನ ಸೆಳೆದರು. ಅದೇ ರೀತಿ ಯುವಕರು ಹಾಗೂ ಮಕ್ಕಳು ಡಿಜೆ ಹಾಡಿಗೆ ಕೈಯಲ್ಲಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಸಾವಿರಾರು ಮುಸಲ್ಮಾನ್ ಭಾಂದವರು ಸೇರಿದ್ದರು.

ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಎರಡು ಹಬ್ಬಗಳು ಒಂದೆ ಬಾರಿ ಆಗಮಿಸಿದ್ದು ಪಟ್ಟಣದಲ್ಲಿ ಜಾತಿ ಭೇದ ಇಲ್ಲದೆ ಎರಡು ಹಬ್ಬಗಳು ಯಾವ ತೊಂದರೆ ಇಲ್ಲದೆ ತುಂಬಾ ಅದ್ಧೂರಿಯಾಗಿ ನಡೆದಿದ್ದು ವಿಶೇಷವಾಗಿತ್ತು .

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Manjunath H D
Kshetra Samachara

Kshetra Samachara

16/09/2024 06:05 pm

Cinque Terre

14.04 K

Cinque Terre

1

ಸಂಬಂಧಿತ ಸುದ್ದಿ