ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಗಣೇಶ ಫೆಸ್ಟ್-2024 - ಪಬ್ಲಿಕ್ ನೆಕ್ಸ್ಟ್, ಶ್ರೀದುರ್ಗಾ ಡೆವಲಪರ್ಸ್‌ನಿಂದ ವಿನೂತನ ಕಾರ್ಯ

ಹುಬ್ಬಳ್ಳಿ: ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾದ ಮಾಧ್ಯಮದ ಕ್ಷೇತ್ರದಲ್ಲಿಯೇ ಅವಿಸ್ಮರಣೀಯ ಹಾಗೂ ನಿಷ್ಪಕ್ಷಪಾತ ವರದಿಯ ಮೂಲಕ ಜನಮಾನಸದಲ್ಲಿ ಹೆಸರು ಮಾಡಿರುವ ಪಬ್ಲಿಕ್ ನೆಕ್ಸ್ಟ್, ಜವಾಬ್ದಾರಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಪರಿಸರ ಸ್ನೇಹಿ ಗಣಪತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಸಹಭಾಗಿತ್ವದಲ್ಲಿ ಗಣೇಶ ಫೆಸ್ಟ್-2024 ಅದ್ದೂರಿಯಾಗಿ ನೆರವೇರಿಸಿದೆ. ಹಾಗಿದ್ದರೆ ಬನ್ನಿ ಕಾರ್ಯಕ್ರಮದ ಝಲಕ್ ನೋಡಿಕೊಂಡು ಬರೋಣ..

ಎಲ್ಲೆಡೆಯೂ ಹಬ್ಬದ ವಾತಾವರಣ, ಸಭೆಗೆ ಶೋಭೆ ಎಂಬುವಂತೆ ನೆರೆದಿದ್ದ ಜನಸಾಗರ, ಸಂಭ್ರಮವನ್ನು ಇಮ್ಮಡಿಗೊಳಿಸಿದ್ದೇ ಜನರ ಚಪ್ಪಾಳೆಯ ಗಾಯನ. ಇದೆಲ್ಲಾ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಗಣೇಶ ಫೆಸ್ಟ್-2024. ಹೌದು.. ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ, ಶ್ರೀ ದುರ್ಗಾ ಡೆವಲಪರ್ಸ್ ಎಂಡಿ ವಿರೇಶ ಉಂಡಿ, ಪಬ್ಲಿಕ್ ನೆಕ್ಸ್ಟ್ ಪ್ರಧಾನ ಸಂಪಾದಕರಾದ ಕೇಶವ ನಾಡಕರ್ಣಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದೇ ವೇಳೆ ಶ್ರೀಗಳು ಹಾಗೂ ಶಾಸಕರು ಪಬ್ಲಿಕ್ ನೆಕ್ಸ್ಟ್ ಕಾರ್ಯವೈಖರಿ ಬಗ್ಗೆ ಕೊಂಡಾಡಿದ್ದಾರೆ.

ಇನ್ನೂ ಮನೆಯಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡಿದ ನೂರಾರು ಜನರಿಗೆ ಪಬ್ಲಿಕ್ ನೆಕ್ಸ್ಟ್ ಹಾಗೂ ಶ್ರೀದುರ್ಗಾ ಡೆವಲಪರ್ಸ್ ವತಿಯಿಂದ ಬಹುಮಾನ ನೀಡಿ ನೆನಪಿನ ಕಾಣಿಕೆಯೊಂದಿಗೆ ಶುಭ ಹಾರೈಸಲಾಯಿತು. ಅಲ್ಲದೇ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಾರ್ವಜನಿಕ ಪೆಂಡಾಲ್ ಗಣಪತಿ ಮಂಡಳಿಗೆ ಹೃದಯಪೂರ್ವಕ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ವಿಶೇಷ ರೀತಿಯಲ್ಲಿ ಪೆಂಡಾಲ್ ಗಣಪತಿ ಪ್ರತಿಷ್ಠಾಪನೆ ಮಾಡಿದ ಮೂರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ತಂದಿದೆ. ಈ ಬಗ್ಗೆ ಶ್ರೀ ದುರ್ಗಾ ಡೆವಲಪರ್ಸ್ ಎಂಡಿ ಖುಷಿಯನ್ನು ಹಂಚಿಕೊಂಡಿದ್ದಾರೆ..

ಒಟ್ಟಿನಲ್ಲಿ ಪೆಂಡಾಲ್ ಗಣಪತಿ, ಸಾರ್ವಜನಿಕ ಗಣಪತಿ ಹಾಗೂ ಮನೆಯಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಲ ಸಂರಕ್ಷಣೆ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಎಲ್ಲರೂ ನಿಭಾಯಿಸುವಂತೆ ಕರೆ ನೀಡಲಾಗಿದ್ದು, ಕಾರ್ಯಕ್ರಮಕ್ಕೆ ಜನಸಾಗರವೇ ನೆರೆದಿರುವುದು ನಿಜಕ್ಕೂ ಕಾರ್ಯಕ್ರಮ ಯಶಸ್ವಿಯಾಗಲು ಸಾಕ್ಷಿಯಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/09/2024 05:26 pm

Cinque Terre

114.09 K

Cinque Terre

2

ಸಂಬಂಧಿತ ಸುದ್ದಿ