ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳೇ ಕಾಲದ ಕರಡಿ ಮಜಲಿಗೆ ಜೈ ಜೈ - ಹೊಸ ಕಾಲದ ಡಿಜೆಗೆ ಬೈ ಬೈ ಹುಬ್ಬಳ್ಳಿಯಲ್ಲೊಬ್ಬ ವಿನೂತನ ಗಣಪ

ಹುಬ್ಬಳ್ಳಿ: ಇತ್ತೀಚಿನ ದಿನಮಾನಗಳಲ್ಲಿ ಹಳ್ಳಿ ಸೇರಿದಂತೆ ನಗರದಲ್ಲಿ ಗಣಪತಿ ಉತ್ಸವ ಅಂದ್ರೆ ಸಾಕು ಡಿಜೆ ಹಾಕಿ ಶಬ್ದ ಮಾಲಿನ್ಯದ ಜೊತೆಗೆ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುವ ಸನ್ನಿವೇಶಗಳನ್ನು ನಾವು ನೋಡಿಯೇ ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಡೆ ಗಣೇಶನ ಉತ್ಸವದಲ್ಲಿ ಡಿಜೆಗೆ ಬೈ ಬೈ ಹೇಳಿ ಕರಡಿ ಮಜಲಿಗೆ ಜೈ ಜೈ ಅಂದಿದ್ದಾರೆ.

ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿನ ಸುಣ್ಣದ ಬಟ್ಟಿ ಏರಿಯಾದಲ್ಲಿ ಶ್ರೀ ದುರ್ಗಾದೇವಿ ಯುವಕ ಮಂಡಳಿಯವರು ಪ್ರತಿ ವರ್ಷವೂ ಕೂಡಾ ಸಾಮೂಹಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.ಇಲ್ಲಿ ಪ್ರತಿ ವರ್ಷ ಗಣೇಶನನ್ನು ಕರೆತರುವಾಗ ಡಿಜೆ ಹಚ್ಚಲಾಗುತ್ತಿತ್ತು.ಆದ್ರೆ ಈ ಬಾರಿ ಡಿಜೆ ಪದ್ಧತಿ ಬೈ ಎಂದು ಹಳೇ ಕಾಲದ ಪದ್ಧತಿಗೆ ಜೈ ಅಂದಿದ್ದಾರೆ.

ಒಟ್ಟಿನಲ್ಲಿ ಜನರೇಷನ್ ಬದಲಾದ ಹಾಗೆ ನಾವು ಆಚರಣೆ ಮಾಡುತ್ತಿರೋ ಸಂಸ್ಕೃತಿ ಕೂಡಾ ಬದಲಾಗುತ್ತಿರುವ ಈ ಕಾಲದಲ್ಲಿ. ಹಳೆಯ ಕಾಲದ ಪದ್ಧತಿಯನ್ನು ಮತ್ತೇ ಮುನ್ನೆಲೆಗೆ ತರುತ್ತಿರುವ ಸುಣ್ಣದ ಬಟ್ಟಿಯ ಶ್ರೀ ದುರ್ಗಾದೇವಿ ಯುವಕ ಮಂಡಳಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.

Edited By : Manjunath H D
Kshetra Samachara

Kshetra Samachara

07/09/2024 04:20 pm

Cinque Terre

25.6 K

Cinque Terre

0

ಸಂಬಂಧಿತ ಸುದ್ದಿ