ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಬೋರ್ಡ್ ಹಾಕಿಕೊಂಡು ನಕಲಿ ಮದ್ಯ ತಯಾರಿಕೆ - 70 ಲಕ್ಷ ಮೌಲ್ಯದ ನಕಲಿ ಮದ್ಯ ಜಪ್ತಿ, ಆರೋಪಿಗಳ ಬಂಧನ

ನೆಲಮಂಗಲ: ನಕಲಿ ಮದ್ಯ ತಯಾರಿಸುತ್ತಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಮತ್ತು ಪೀಣ್ಯದಲ್ಲಿ ಪೊಲೀಸರು ದಾಳಿ ನಡೆಸಿ ಗೋದಾಮಿನಲ್ಲಿದ್ದ 70 ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ‌ ಮದ್ಯವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ದಾಳಿಯ ವೇಳೆ ರವಿ @ ಮರಿರಾಜ, ಕೇಶವಮೂರ್ತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ನಕಲಿ ಮದ್ಯಕ್ಕೆ ಅಮಲು ಬರುವ ಪದಾರ್ಥ ಮತ್ತು ಬಣ್ಣ ಮಿಶ್ರಣ ಮಾಡಿ ಬಾಟಲಿಗೆ ನಕಲಿ ಮದ್ಯ ತುಂಬಿ ದುಬಾರಿ ಬ್ರಾಂಡ್ ಲೇಬಲ್ ಅಂಟಿಸುತ್ತಿದ್ದರು.

ಗಂಗೊಂಡಹಳ್ಳಿಯ ಚಾಮುಂಡಿ ಲೀಔಟ್‌ಲ್ಲಿ 90 ಬ್ಯಾರೆಲ್‌ನಲ್ಲಿ ಇದ್ದ 4,860 ಲೀಟರ್ ಮದ್ಯವನ್ನ ಜಪ್ತಿ ಮಾಡಲಾಗಿದೆ. ದೊಡ್ಡಬಿದರಕಲ್ಲಿನ ಹೆಚ್ಎಂಟಿ ಲೇಔಟ್‌ನ 1ನೇ ಕ್ರಾಸ್‌ಲ್ಲಿನ ಅಂಗಡಿಯೊಂದ್ರಲ್ಲಿ ಅಡಗಿಸಿಟ್ಟಿದ್ದ 104 ಬ್ಯಾರಲ್‌ಗಳಲ್ಲಿದ್ದ 5616 ಲೀಟರ್ ನಕಲಿ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಮಿಳುನಾಡು ಸೇರಿ ಕರ್ನಾಟಕದ ಹಲವಡೆ ಹಣ ಸಂಪಾದನೆ ಮಾಡಲು ಈ ಕೃತ್ಯ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅನುಮಾನ ಬಾರದಂತೆ ಗೋದಾಮಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಓನರ್ ಬೋರ್ಡ್ ಹಾಕಿ ದಂಧೆ ನಡೆಸಿದ್ದಾರೆ.

ಇನ್ನೂ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲದ ಡಿವೈಎಸ್‌ಪಿ ಜಗದೀಶ್ ರಿಂದ ಎಸ್‌ಪಿ ಸಿ.ಕೆ ಬಾಬಾ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ 13, 14, 32, 38(1) KE ಆಕ್ಟ್ ಜೊತೆಗೆ 286 ಬಿಎನ್ಎಸ್ 2023ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Edited By : Nagesh Gaonkar
PublicNext

PublicNext

07/09/2024 03:43 pm

Cinque Terre

45.1 K

Cinque Terre

0

ಸಂಬಂಧಿತ ಸುದ್ದಿ