ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಶೇಷ ಚೇತನ ಮಕ್ಕಳ ಬಾಳಿಗೆ ಕಣ್ಣಾದ 'ಸರ್ವ ಸಮರ್ಥ' ಶಿಕ್ಷಕ ಮಹಾಂತೇಶ

ಧಾರವಾಡ: ಧಾರವಾಡ ಸಮರ್ಥನಂ ಸಂಸ್ಥೆಯ ಈ ವಿಶೇಷ ಚೇತನ ಶಿಕ್ಷಕ ನಾನಾ ಅಂಗವೈಕಲ್ಯ ಹೊಂದಿದವರಿಗೆ ಮಾರ್ಗದರ್ಶನ ಮಾಡಿ ಉತ್ತಮ ಜೀವನ ರೂಪಿಸಿಕೊಟ್ಟಿದ್ದಾರೆ. ಈ ಕುರಿತಾದ ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ ಇಲ್ಲಿದೆ...

ಕೌಶಲ್ಯ ಎಂಬುದು ಅಂಗವೈಕಲ್ಯ ಮೀರಿದ್ದು. ಆಸಕ್ತಿಯಿಂದ ನಿರಂತರ ಅಭ್ಯಾಸ ಮಾಡಿದರೆ ಕೌಶಲ್ಯ ಸಿದ್ಧಿಸಿಕೊಳ್ಳುವುದು ಯಾರಿಗೂ ಕಷ್ಟವಲ್ಲ. ಧಾರವಾಡದ ಸತ್ತೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ತರಬೇತುದಾರರಾಗಿರುವ ಮಹಾಂತೇಶ ನೀರಲಕೇರಿ ಅವರಿಂದ ತರಬೇತಿ ಪಡೆದಿರುವ ಹತ್ತಾರು ಯುವಕರು ಬ್ಯಾಂಕ್ ಹಾಗೂ ವಿವಿಧ ಕಾಲ್‌ ಸೆಂಟರ್, ಬಿಪಿಒ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

ಕಣ್ಣಿಲ್ಲದಿದ್ದರೂ ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ತಜ್ಞತೆ ಪಡೆದುಕೊಂಡಿರುವ 26ರ ಹರೆಯದ ಮಹಾಂತೇಶ ನೀರಲಕೇರಿ ಅವರು ಸಮರ್ಥನಂ ಸಂಸ್ಥೆಗೆ ಬರುವ ವಿಶೇಷ ಮಕ್ಕಳಿಗೆ ತರಬೇತಿ ನೀಡುವ ಕಾಯಕವನ್ನು ಕಳೆದ 6 ವರ್ಷಗಳಿಂದ ಮಾಡುತ್ತಿದ್ದಾರೆ.

ಮೂಲತಃ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕು ಕಾಳಾಪುರದವರಾದ ಮಹಾಂತೇಶ ಅವರು ಪ್ರಸ್ತುತ ಧಾರವಾಡ ಸಮರ್ಥನಂ ಸಂಸ್ಥೆಯಲ್ಲಿ ತರಬೇತಿ ಪಡೆದು, ಹಾಸ್ಟೆಲ್‌ ನಲ್ಲಿದ್ದುಕೊಂಡು ಪದವಿ ಪೂರ್ಣಗೊಳಿಸಿದರು. ಅವರ ಉತ್ಸಾಹ, ಕೌಶಲ್ಯ, ಚಾಕಚಕ್ಯತೆ ಗಮನಿಸಿದ ಸಂಸ್ಥೆ ಅವರನ್ನು ತರಬೇತುದಾರರಾಗಿ ಇದೀಗ ನೇಮಕ ಮಾಡಿಕೊಂಡಿದೆ.

ಅಂಧರು ಸೇರಿದಂತೆ ವಿವಿಧ ಬಗೆಯ ಅಂಗವೈಕಲ್ಯ ಹೊಂದಿದವರು ಇಲ್ಲಿ ತರಬೇತಿಗಾಗಿ ಬರುತ್ತಾರೆ. ಅವರಿಗೆಲ್ಲ ಮಹಾಂತೇಶ ತಾಳ್ಮೆಯಿಂದ ಕಲಿಸುತ್ತಾರೆ. ಕಂಪ್ಯೂಟ‌ರ್ ಹಾಗೂ ಮೊಬೈಲ್ ತರಬೇತಿ ನೀಡಬೇಕೆಂದರೆ ನೂತನ ಸಾಫ್ಟ್‌ವೇರ್, ಹೊಸ ಅಪ್ಲಿಕೇಶನ್‌ಗಳ ಕುರಿತು ಅಪ್‌ಡೇಟ್ ಇರಬೇಕಾಗುತ್ತದೆ. ಇದನ್ನೆಲ್ಲ ಮನಗಂಡು ಆಸಕ್ತಿಯಿಂದ ತರಬೇತಿ ನೀಡುತ್ತಿದ್ದಾರೆ. ಶಿಬಿರಾರ್ಥಿಗಳು ಉದ್ಯೋಗ ಪಡೆಯಲು ಅಗತ್ಯವಾದ ಜ್ಞಾನ ನೀಡುತ್ತಿದ್ದಾರೆ ಎಂಬುದು ವಿಶೇಷ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/09/2024 07:59 am

Cinque Terre

78.91 K

Cinque Terre

2

ಸಂಬಂಧಿತ ಸುದ್ದಿ