ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಎಪಿಎಂಸಿ ಮಳಿಗೆ ನಿರ್ಮಾಣ ಚುರುಕು - ಯಾವಾಗ ಆರಂಭ ಮಾರುಕಟ್ಟೆ ?

ಕುಂದಗೋಳ: ಎಪಿಎಂಸಿ ಆದಾಯ ಹೆಚ್ಚಳ ಮತ್ತು ರೈತಾಪಿ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಲೀಸ್ ಕಂ ಸೇಲ್ ಆದಂತಹ ನಿವೇಶನಗಳಲ್ಲಿ ವ್ಯಾಪಾರಿ ಮಳಿಗೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೌದು. ಕುಂದಗೋಳದ ಎಪಿಎಂಸಿ ಆವರಣದ ಬಹುತೇಕ 15 ಗೋದಾಮು ಮಳಿಗೆ ನಿರ್ಮಾಣಕ್ಕೆ ನೀಡಿದ 9 ತಿಂಗಳು ಹೆಚ್ಚಿನ ಅವಧಿ ವರ್ತಕರಿಗೆ ವರದಾನವಾಗಿದೆ. ಕಳೆದ ಹಲವು ವರ್ಷಗಳಿಂದ ಆದಾಯ ಮೂಲವೇ ಇಲ್ಲದೆ ಸೊರಗಿದ್ದ ಕುಂದಗೋಳ ಎಪಿಎಂಸಿ ಮಾರುಕಟ್ಟೆ ವರ್ತಕರಿಗೆ ನಿವೇಶನ ಹಸ್ತಾಂತರ ಮತ್ತು ಮಳಿಗೆ, ಗೋದಾಮು ನಿರ್ಮಿಸಿ ವ್ಯಾಪಾರಿ ಚಟುವಟಿಕೆ ಕೈಗೊಳ್ಳುವ ಕಾರ್ಯ ಪ್ರಗತಿಯಲ್ಲಿದ್ದು ಮಳಿಗೆಗಳು, ಗೋದಾಮು ತಲೆ ಎತ್ತಿವೆ.

ಕಳೆದ 2021 ಸೆಪ್ಟೆಂಬರ್ ತಿಂಗಳಲ್ಲಿ ಹಂಚಿಕೆಯಾದ ಒಟ್ಟು 22 ವರ್ತಕರ ವಿವಿಧ ಅಳತೆಯ ನಿವೇಶನಗಳಲ್ಲಿ 16 ವರ್ತಕರು ಈಗಾಗಲೇ ಗೋದಾಮು ರಚನೆ ಜೊತೆಗೆ 9 ತಿಂಗಳು ಹೆಚ್ಚಿನ ಸಮಯ ಪಡೆದಿದ್ದಾರೆ. ಇನ್ನುಳಿದ 3 ವರ್ತಕರು ಶೇಕಡಾ 25 ಹಣ ತುಂಬಿ ಶೇಕಡಾ 75 ಬಾಕಿ ಇಟ್ಟುಕೊಂಡರೇ, ಬಾಕಿ 3 ಜನ ಶೇಕಡಾ 75 ಹಣ ನೀಡಿಲ್ಲವಂತೆ. ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿಗಳು ಕೊಟ್ಟ ಮಾಹಿತಿ ಹೀಗಿದೆ.

ಒಟ್ಟಾರೆ ಇನ್ನೇನು ಬೇಸಿಗೆ ಸಮೀಪಿಸುತ್ತಿದ್ದಂತೆ ವ್ಯಾಪಾರಿ ಗೋದಾಮು ಮತ್ತು ಮಳಿಗೆ ನಿರ್ಮಾಣ ಕಾರ್ಯ ವೇಗ ಪಡೆದು ಪ್ರಸ್ತುತ ಮುಂದಿನ ವರ್ಷಕ್ಕಾದರೂ ಕುಂದಗೋಳ ಎಪಿಎಂಸಿಯಲ್ಲೇ ಮಾರುಕಟ್ಟೆ ನಡೆಯುತ್ತಾ? ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

05/09/2024 05:56 pm

Cinque Terre

47.7 K

Cinque Terre

0

ಸಂಬಂಧಿತ ಸುದ್ದಿ