ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆಎಂಸಿ ಆರ್ ಐ ನಲ್ಲಿ ದೂರು ಪೆಟ್ಟಿಗೆ ಅನುಷ್ಠಾನ, ಜನರ ಸಮಸ್ಯೆ ಆಲಿಸಲು ಕ್ರಮ..!

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕೆಎಂಸಿ ಆರ್ ಐ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದೆ. ಇದರ ನಡುವೆ ವೈದ್ಯರ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈಗ ವಿನೂತನ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡು ದೂರು ಪೆಟ್ಟಿಗೆ ಅನುಷ್ಠಾನಕ್ಕೆ ಮುನ್ನುಡಿ ಬರೆದಿದ್ದಾರೆ.

ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ-ಆರ್‌ಐ) ಆಸ್ಪತ್ರೆಯು ರೋಗಿಗಳ ಆರೈಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಜನರು ತಮ್ಮ ಕುಂದುಕೊರತೆ ಮತ್ತು ಕಾಳಜಿಗಳನ್ನು ತಿಳಿಸಲು ದೂರು ಪೆಟ್ಟಿಗೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಹೌದು.. ಈ ಉಪಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮುನ್ನಡೆಸುತ್ತಿದ್ದಾರೆ. ಕೆಎಂಸಿ-ಆರ್‌ಐಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಆರೋಗ್ಯ ಸೇವೆಗಳಲ್ಲಿನ ವಿಳಂಬ ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯರ ಗೈರು ಹಾಜರಿಯ ಬಗ್ಗೆ ಲಾಡ್‌ ಗೆ ತಿಳಿಸಲಾಯಿತು. ಈ ನಿಟ್ಟಿನಲ್ಲಿ ದೂರು ಪೆಟ್ಟಿಗೆ ಅನುಷ್ಠಾನಕ್ಕೆ ಸೂಚನೆ ನೀಡಿದ್ದು, ಸಾರ್ವಜನಿಕರು ಸರ್ಕಾರದ ಗಮನಕ್ಕೆ ತರಲು ಸೂಕ್ತ ಮಾರ್ಗವಾಗಿದೆ.

ಇನ್ನೂ ಈ ದೂರುಗಳಿಗೆ ಸ್ಪಂದಿಸುವ ಹಾಗೂ ದೂರು ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಾಮುಖ್ಯತೆಯನ್ನು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಸಾರ್ವಜನಿಕ ದೂರು ಆಲಿಸುವ ಹಾಗೂ ಅಗತ್ಯ ರೀತಿಯ ಕ್ರಮಗಳನ್ನು ಜರುಗಿಸುವ ನಿಟ್ಟಿನಲ್ಲಿ ಕಂಪ್ಲೆಂಟ್ ಬಾಕ್ಸ್ ಅನುಷ್ಠಾನಕ್ಕೆ ಮುಂದಾಗಿರುವುದು ಇನ್ನು ಮುಂದೆ ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

Edited By : Somashekar
Kshetra Samachara

Kshetra Samachara

04/09/2024 12:58 pm

Cinque Terre

20.54 K

Cinque Terre

1

ಸಂಬಂಧಿತ ಸುದ್ದಿ