ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾನವೀಯತೆ ಮರೆತ ಎನ್‌ಎಚ್ ಹೈವೇ ಸಿಬ್ಬಂದಿ - ಕ್ರಮ ಕೈಗೊಳ್ಳುತ್ತಾರಾ ಧಾರವಾಡ DC & SP?

ಹುಬ್ಬಳ್ಳಿ: ಅದು ರಾಷ್ಟ್ರೀಯ ಹೆದ್ದಾರಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ರಹದಾರಿ. ಆದ್ರೆ ಈ ರಸ್ತೆಯಲ್ಲಿ ಏನಾದ್ರು ಅಪಘಾತವಾಗಿ ವಾಹನ ಸವಾರರು ಸ್ಥಳದಲ್ಲೇ ಸತ್ತರೆ ಅವರ ದೇಹವನ್ನು ರಸ್ತೆಯಲ್ಲಿಯೇ 6 ರಿಂದ 7 ಗಂಟೆಗಳ ಕಾಲ ರಸ್ತೆಯ ಪಕ್ಕದಲ್ಲೇ ಇಟ್ಟುಕೊಂಡು ಕೂಡುವ ಪರಿಸ್ಥಿತಿ ಇದೀಗ ಬಂದಿದೆ. ಇದಕ್ಕೆ ಕಾರಣ ಮಾತ್ರ ಎನ್‌ಎಚ್ ಹೈವೇ ಆಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ ಅಂತ ಇದೀಗ ಸ್ಥಳೀಯರು ಆರೋಪವನ್ನು ಮಾಡ್ತಿದ್ದಾರೆ.

ಹುಬ್ಬಳ್ಳಿ-ಗದಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಬರಬೇಕಾದ ಎನ್‌ಎಚ್ ಹೈವೇ ಆಂಬ್ಯುಲೆನ್ಸ್ ಸಿಬ್ಬಂದಿ ಬರೋದೆ ಮೊದಲೆ ಲೇಟ್. ಅಷ್ಟರಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದರೆ ಅಂತೂ ಮುಗಿದೆ ಹೋಯಿತು. 6 ರಿಂದ 7 ಗಂಟೆಗಳ ಕಾಲ ಶವವನ್ನು ರಸ್ತೆಯಲ್ಲಿ ಇಟ್ಟುಕೊಂಡು ಕಾಯಬೇಕು. ನಂತರ ಬೇರೆ ವಾಹನದ ವ್ಯವಸ್ಥೆ ಮಾಡಿಕೊಂಡು ಶವವನ್ನು ಸಾಗಾಟ ಮಾಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಎನ್ ಎಚ್ ಆಂಬ್ಯುಲೆನ್ಸ್ ಸಿಬ್ಬಂದಿಯನ್ನು ಕೇಳಿದ್ರೆ ನಾವು ಶವಗಳನ್ನು ಸಾಗಿಸೋದಿಲ್ಲ ಬೇಕ ಅಂದ್ರೆ ಹಿರಿಯ ಅಧಿಕಾರಿಗಳಿಗೆ ಹೇಳಿ ಅಂತ ಉಡಾಫೆ ಉತ್ತರ ಕೊಡ್ತಾರೆ ಎಂದು ಸ್ಥಳೀಯರು ಹೇಳಿದ್ದು ಹೀಗೆ.

ಸದ್ಯ ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸಿದ ಯಾರಾದ್ರೂ ಸಾವನ್ನಪ್ಪಿದರೆ ಶವವನ್ನು ರಸ್ತೆಯ ಪಕ್ಕದಲ್ಲಿ ಇಟ್ಟುಕೊಂಡು ಕಾಯುವ ಸ್ಥಿತಿ ಒಂದು ಕಡೆಯಾದ್ರೆ. ಶವ ಬಿದ್ದ ಸ್ಥಳದಲ್ಲೇ ಇರುವೆ ದೇಹವನ್ನು ಪೂರ್ತಿಯಾಗಿ ಆವರಿಸಿ ಬಿಡುತ್ತವೆ. ಇದೆಲ್ಲ ಗೊತ್ತಿದ್ರು ಕೂಡಾ ಹೈವೇ ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಾತ್ರ ಇದೆಲ್ಲ ಕಂಡರು ಕೂಡಾ ಮಾನವೀಯತೆ ಮರೆತಿದ್ದಾರೆ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವ್ರು ಎನ್ ಎಚ್ ಹೈವೇ ಆಂಬ್ಯುಲೆನ್ಸ್ ಸಿಬ್ಬಂದಿಯ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Somashekar
Kshetra Samachara

Kshetra Samachara

25/07/2024 12:29 pm

Cinque Terre

29.72 K

Cinque Terre

2

ಸಂಬಂಧಿತ ಸುದ್ದಿ