ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವರ್ಗಾವಣೆಯಾದ ಪೊಲೀಸ್ ಮುಖ್ಯ ಕಾನ್ಸ್‌ಟೇಬಲ್‌ಗಳಿಗೆ ಬಿಳ್ಕೋಡುಗೆ ಸನ್ಮಾನ

ಕುಂದಗೋಳ : ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳೆದ ಐದು ವರ್ಷಗಳ ಜನಸ್ನೇಹಿ ಸೇವೆ ಸಲ್ಲಿಸಿ ಪ್ರಸ್ತುತ ವರ್ಗಾವಣೆಯಾದ ಪೊಲೀಸ್ ಮುಖ್ಯ ಕಾನ್ಸ್‌ಟೇಬಲ್‌ಗಳಿಗೆ ಪೊಲೀಸ್ ವೃತ್ತ ನಿರೀಕ್ಷಕ ಶಿವಾನಂದ ಅಂಬಿಗೇರ್ ಅವರು ಅಭಿನಂದಿಸಿ ಬಿಳ್ಕೋಟ್ಟಿದ್ದಾರೆ.

ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮುಖ್ಯ ಕಾನ್ಸ್‌ಟೇಬಲ್‌ ಹುದ್ದೆಯಲ್ಲಿದ್ದ ಬಸವರಾಜ ಶಿರಕೋಳ, ಮಡಿವಾಳಪ್ಪ ಜೋಡಗೇರಿ, ವಿರೂಪಾಕ್ಷ ಜೋಗಿ, ಬಸವರಾಜ ಭಾಗವಾಡ, ರತ್ನಾ ಸಜ್ಜನ ಐವರು ವರ್ಗಾವಣೆ ಆಗಿದ್ದಾರೆ. ಇವರಿಗೆ ಸಿಪಿಐ ಸಂಜಯ್ ಅಂಬಿಗೇರ್ ಹಾಗೂ ಸಹ ಸಿಬ್ಬಂದಿಗಳು ಸನ್ಮಾನಿಸಿ ಬಿಳ್ಕೋಟ್ಟರು, ಈ ವೇಳೆ ಪೊಲೀಸ್ ಠಾಣೆ ಸಹ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರ್ಗಾವಣೆಯಾದ ಸಿಬ್ಬಂದಿಗಳು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಸಹೋದ್ಯೋಗಿಗಳ ಒಡನಾಟದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Edited By : Nirmala Aralikatti
Kshetra Samachara

Kshetra Samachara

24/07/2024 01:55 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ