ಹುಬ್ಬಳ್ಳಿ: ನಗರದಲ್ಲಿ ವಾರಾಂತ್ಯದ ಕರ್ಪೂ ಜಾರಿಯಲ್ಲಿದ್ದರೂ ಕೂಡ ನಗರದ ತೊರವಿ ಹಕ್ಕಲ ಕ್ರಾಸ್‌ದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಕಮರಿಪೇಟೆ ಪೊಲೀಸರು ಬಂಧಿಸಿ , ಆತನಿಂದ ಅಂದಾಜು 17,860 ರೂ. ಮೌಲ್ಯದ 45 ಲೀಟರ್ ಮದ್ಯ , 420 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಅಶೋಕ ಎಂಬಾತನು ರವಿವಾರ ಬೆಳಗ್ಗೆ ಹೊಟೇಲ್‌ವೊಂದರ ಬಳಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರುತ್ತಿದ್ದಾಗ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Kshetra Samachara
18/01/2022 12:31 pm