ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಮೂಲಕ ಜನತೆಗೆ ಧೈರ್ಯ ತುಂಬಿದ ಮನೋವೈದ್ಯ ಡಾ.ಪಾಂಡುರಂಗಿ

ಧಾರವಾಡ: ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಆದರೆ, ಈ ರೋಗಕ್ಕೆ ಯಾರೂ ಹೆದರುವ ಅಗತ್ಯವಿಲ್ಲ. ತಮ್ಮ ತಮ್ಮ ಸುರಕ್ಷತೆಯಲ್ಲಿರುವುದು ಮುಖ್ಯ ಎಂದು ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಹೇಳಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಮೂಲಕ ನಾಡಿನ ಜನತೆಗೆ ಈ ಸಂಬಂಧ ಧೈರ್ಯ ಹೇಳಿರುವ ಅವರು, ಯಾರೂ ಕೊರೊನಾ ವೈರಸ್ ಗೆ ಹೆದರಬೇಡಿ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಇನ್ನೊಂದು ವಾರ ಮನೆಯಲ್ಲಿರಿ. ಮನೆಯಲ್ಲಿ ಕಾಲ ಕಳೆಯಲು ಸಾಕಷ್ಟು ಆಟಗಳಿವೆ ಆಡಿ, ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಿ, ಸಿನಿಮಾ ನೋಡಿ, ಸಂಗೀತ ಕೇಳಿ ಆ ಮೂಲಕ ಕ್ವಾರೈಂಟೆನ್ ಗೆ ಒಳಗಾದವರು ಯಾವುದೇ ಆತಂಕಕ್ಕೆ ಒಳಗಾಗದೇ ತಮ್ಮ ಆರೋಗ್ಯದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು ಮದ್ಯಪಾನ ಮಾಡುವವರು ಆ ವ್ಯಸನವನ್ನು ಬಿಡಲು ಇದೊಂದು ಸಂದರ್ಭ ಎಂದು ತಿಳಿದುಕೊಳ್ಳಬೇಕು. ಆ ಮೂಲಕ ಅದರಿಂದ ಹೊರಬರಬೇಕು ಎಂದಿದ್ದಾರೆ.

Edited By :
Kshetra Samachara

Kshetra Samachara

02/04/2020 01:38 pm

Cinque Terre

30.4 K

Cinque Terre

1

ಸಂಬಂಧಿತ ಸುದ್ದಿ