ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಗಣಪತಿ ಪ್ರತಿಷ್ಠಾಪನೆ ವಿಚಾರಕ್ಕೇ ಗಲಾಟೆ; ಇನ್ಸ್ಪೆಕ್ಟರ್ ಸುರೇಶ್ ಹಳ್ಳೂರ್ ನೇತೃತ್ವದಲ್ಲಿ ಸಂಧಾನ

ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಇಡುವ ವಿಚಾರಕ್ಕೇ ಹಿಂದೂ ಪರ ಸಂಘಟನೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ಇಎಸ್ಐ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು.ಆದ್ರೆ ಈ ಬಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಜ್ಯಾಸ್ತಿ ಆಗಿರುವ ಕಾರಣ ಆಸ್ಪತ್ರೆಯಲ್ಲಿಯೇ ಇರುವ ಗಣಪತಿಯ ಪೂಜೆಯನ್ನು ಆಸ್ಪತ್ರೆಯ ಸಿಬ್ಬಂದಿ ಮಾಡಲು ಮುಂದಾಗಿದ್ದರು.

ಹೀಗಾಗಿ ಇದೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ ಎಂಬಾತನನ್ನು ಒತ್ತಾಯಪೂರ್ವಕವಾಗಿ ವಾಲೆಂಟರಿ ರಿಟೈರ್ಡ್ ಮೆಂಟ್ ಕೊಡಿಸಲಾಗಿತ್ತು,ಅದೇ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ಗಲಾಟೆ ಮಾಡುವ ಉದ್ದೇಶದಿಂದ ಬೇರೊಂದು ಗಣಪತಿಯನ್ನು ತಂದು ಆಸ್ಪತ್ರೆಯಲ್ಲಿ ಇಡಲು ಮುಂದಾಗಿದ್ದ.ಇದಕ್ಕೆ ಆಸ್ಪತ್ರೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೆಲವು ಹಿಂದೂ ಪರ ಸಂಘಟನೆಯವರನ್ನು ಕರೆದು ಆಸ್ಪತ್ರೆಯ ಮುಖ್ಯಸ್ಥ ಮುಸ್ಲಿಂ ಆಗಿರುವ ಕಾರಣ ಗಣಪತಿ ಪ್ರತಿಷ್ಠಾಪನೆ ಮಾಡಲು ಅನುಮತಿ ಕೊಡುತ್ತಿಲ್ಲ ಎಂದು ಆರೋಪವನ್ನು ಮಾಡಲಾಗಿತ್ತು.

ಅಷ್ಟೇ ಅಲ್ಲದೇ ಪ್ರಶಾಂತ್ ಹಾಗೂ ಕೆಲವು ಹಿಂದೂ ಪರ ಸಂಘಟನೆಗಳು ಆಸ್ಪತ್ರೆಯ ಪರವಾನಿಗೆ ಪಡೆಯದೆ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬೆನ್ನಲ್ಲೇ.ಆಸ್ಪತ್ರೆಯ ಮುಂಭಾಗದಲ್ಲಿ ಗಲಾಟೆ ಮಾಡುವ ಹಂತಕ್ಕೆ ಹೋಗಿತ್ತು.

ಹೀಗಾಗಿ ಈ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕೂಡಲೇ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಹಳ್ಳೂರ್ ಧಾವಿಸಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಹಿಂದುಪರ ಸಂಘಟನೆಯವರ ಜೊತೆ ಮಾತುಕತೆ ನಡೆಸಿ ಪರಿಸ್ಥಿಯನ್ನು ಶಾಂತಗೊಳಿಸಿದರು.

ಸದ್ಯ ಆಸ್ಪತ್ರೆಯಲ್ಲಿ ಹಿಂದೂ ಪರ ಸಂಘಟನೆಯವರು ಪ್ರತಿಷ್ಠಾಪನೆ ಮಾಡಲಾಗಿರುವ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.ಒಟ್ಟಿನಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆಯಬಹುದಾಗಿದ್ದ ಗಣಪತಿ ಗಲಾಟೆಯನ್ನು ಇನ್ಸ್ಪೆಕ್ಟರ್ ಸುರೇಶ್ ಹಳ್ಳೂರು ನೇತೃತ್ವದಲ್ಲಿ ಸರಳವಾಗಿ ಸಂದಾನವಾಗಿದೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/09/2024 05:29 pm

Cinque Terre

125.54 K

Cinque Terre

7

ಸಂಬಂಧಿತ ಸುದ್ದಿ