ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಕೋಟಿಗೂ ಅಧಿಕ ಮೌಲ್ಯದ ಕಟ್ಟಡಕ್ಕೆ ಮತ್ತೆ ತೇಪೆ, ಶಾಶ್ವತ ಪರಿಹಾರ ಯಾವಾಗ?

ಅಳ್ನಾವರ: ಸೋರುವ ತಳಕ್ಕೆ ಬರೀ ತೇಪೆ ಹಚ್ಚುವ ಕೆಲಸವೇ ಆಯ್ತೆ ವಿನಹ,ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಗುತ್ತಿಗೆದಾರ ಮತ್ತೆ ಎಡವಿದ್ದಾನೆ. ಕಳಪೆ ಕಾಮಗಾರಿಗೆ ತಾಲೂಕಿನೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತ ಪಡಿಸಿದರೂ ಗುತ್ತಿಗೆದಾರ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾನೆ.

ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಸುಮಾರು 1ಕೋಟಿಗೂ ಅಧಿಕ ಹಣದಲ್ಲಿ ಗುತ್ತಿಗೆದಾರ ಅಳ್ನಾವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನ ಪ್ರಾರಂಭಿಸಿದ. ಅದ್ಯಾವ ಗಳಿಗೆಯಲ್ಲಿ ಈ ಕಟ್ಟಡ ಕಾಮಗಾರಿ ಪ್ರಾರಂಭಿಸಿದನೋ ಗೊತ್ತಿಲ್ಲ, ಇಡೀ ಕಟ್ಟಡಕ್ಕೆ ಕಟ್ಟಡವೇ ಮಳೆಗೆ ಸೋರತೊಡಗಿದೆ. ಕಳೆದ ವರ್ಷ ಸೋರುವ ಸಂದರ್ಭದಲ್ಲಿ ಪಬ್ಲಿಕ್ ನೆಕ್ಸ್ಟ್ ಸುದ್ದಿವಾಹಿನಿಯು ಸುದ್ದಿಯೊಂದನ್ನ ಪ್ರಸಾರ ಮಾಡಿ,ಗುತ್ತಿಗೆದಾರನ ಕರ್ಮಕಾಂಡವನ್ನ ಬಿತ್ತರಿಸಿತ್ತು.

ಕಳೆದ ತಿಂಗಳು ಮಳೆಗೆ ಮತ್ತೆ ಕಟ್ಟಡ ಸೋರತೊಡಗಿತ್ತು. ಇದನ್ನ ಗಮನಿಸಿ ಪಬ್ಲಿಕ್ ನೆಕ್ಸ್ಟ್ ಸುದ್ದಿ ಮಾಧ್ಯಮವೂ ಮತ್ತೆ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿಗೆ ಮಣಿದ ಗುತ್ತಿಗೆದಾರ, ಇಂದು ಸೋರುವ ಕಟ್ಟಡಕ್ಕೆ ಮತ್ತೆ ತ್ಯಾಪೆ ಹಚ್ಚುವ ಕಾರ್ಯ ಮುಂದುವರೆಸಿದ್ದಾನೆ. ಹೀಗೆ ಆದರೆ ಕೋಟಿಗೂ ಅಧಿಕ ಮೌಲ್ಯದ ಕಟ್ಟಡಕ್ಕೆ ಶಾಶ್ವತ ಪರಿಹಾರ ಯಾವಾಗಾ ಎಂಬುವ ಪ್ರಶ್ನೆ ಉದ್ಭವವಾಗುತ್ತೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಈ ಸೋರುವ ಕಟ್ಟಡಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ತಾಲೂಕಿನ ಜನರ ಆಗ್ರಹವಾಗಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By : Manjunath H D
Kshetra Samachara

Kshetra Samachara

05/09/2024 02:36 pm

Cinque Terre

17.76 K

Cinque Terre

0

ಸಂಬಂಧಿತ ಸುದ್ದಿ