ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಬೀದಿ ಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್..!

ವಿಜಯನಗರ : ಬೀದಿ ಬದಿ ಅಂಗಡಿ, ಮುಂಗಟ್ಟುಗಳನ್ನ ಇಟ್ಟುಕೊಂಡು ವ್ಯಾಪಾರ - ವಹಿವಾಟು ನಡೆಸ್ತಿದ್ದ ವ್ಯಾಪಾರಿಗಳಿಗೆ ಹೊಸಪೇಟೆ ನಗರಸಭೆ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ.

ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ, ಜನರ ಓಡಾಟಕ್ಕೆ ತೊಂದರೆ ಕೊಡಬೇಡಿ. ಹೀಗಂತ ನಗರಸಭೆ ಸಿಬ್ಬಂದಿ ಹತ್ತಾರು ಬಾರಿ ವ್ಯಾಪಾರಸ್ಥರಿಗೆ ವಾರ್ನಿಂಗ್ ಕೊಟ್ಟಿದ್ರು. ಆದ್ರೆ ಅಧಿಕಾರಿಗಳ ಸೂಚನೆಗೆ ಕ್ಯಾರೇ ಎನ್ನದೇ ಬೀದಿಬದಿ ವ್ಯಾಪಾರಸ್ಥರು ದಿನನಿತ್ಯ ವ್ಯಾಪಾರದಲ್ಲಿ ತೊಡಗಿಕೊಳ್ತಿದ್ರು.

ಅಧಿಕಾರಿಗಳ ಸೂಚನೆಗೂ ಬಗ್ಗದೇ ಇರುವ ವ್ಯಾಪಾರಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದು, ಅಂಗಡಿಗಳನ್ನ ವ್ಯಾಪಾರಸ್ಥರಿಗೆ ಹೇಳದೇ - ಕೇಳದೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ‌. ಇದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರೀತಿ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನ ತೆರವು ಮಾಡಿದ್ರೆ ನಿತ್ಯದ ಗಂಜಿಗೆ ಕೊಳ್ಳಿ ಇಟ್ಟಂತೆ ಆಗುತ್ತೆ, ಅವರೆಲ್ಲಾ ಬಡವರು, ಅವರಿಗೆ ತೊಂದರೆ ಕೊಡಬೇಡಿ ಅಂತ ಬೀದಿಬದಿ ವ್ಯಾಪಾರಿಗಳ ಸಂಘಟನೆ ಮುಖಂಡ ಸಂತೋಷ್ ಕಲ್ಮಠ ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

22/01/2025 10:07 pm

Cinque Terre

57.56 K

Cinque Terre

0