ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ, ಕೇವಲ ನಾಲ್ಕೇ ದಿನದಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ ಖಾಕಿ

ವಿಜಯನಗರ: ಜಿಲ್ಲೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರ ಸೋಗಿನಲ್ಲಿ ಬೈಕ್ ಅಡ್ಡಗಟ್ಟಿ ಕಳ್ಳತನ ಮಾಡ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನ ಹರಪನಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೇವಲ ನಾಲ್ಕೇ ದಿನದಲ್ಲಿ ಪೊಲೀಸರು ಖದೀಮರನ್ನ ಹೆಡೆಮುರಿ ಕಟ್ಟಿದ್ದು ಬಿಗ್ ಇಂಪ್ಯಾಕ್ಟ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಸೂರ್ಯ ಹಾಗೂ ಹರೀಶ್ ಬಂಧಿತ ಕಳ್ಳರು ಅಂತ ಗುರುತಿಸಲಾಗಿದೆ. ಕಳ್ಳರನ್ನ ಬಂಧಿಸಿ 1 ಲಕ್ಷ‌ 50 ಸಾವಿರ ನಗದು ಹಣ ಹಾಗೂ ಒಂದು‌ ಬೈಕ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರೇ ಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 27ರಂದು ಎಸ್ ಬಿಐ ಬ್ಯಾಂಕ್‌ನಿಂದ ಗ್ರಾಹಕರು ಹಣ ಬಿಡಿಸಿಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ಸೋಗಿನಲ್ಲಿ ಬಂದು ಬೈಕ್‌ ಅಡ್ಡಗಟ್ಟಿ 50 ಸಾವಿರ ಹಣ ಎಗರಿಸಿ ಕಳ್ಳರು ಪರಾರಿಯಾಗಿದ್ರು. ಜೊತೆಗೆ ಕೊಟ್ಟೂರಿನ ಬ್ಯಾಂಕ್ ಮುಂದೆ ಹಣ ಬಿಡಿಸಿಕೊಂಡು ಹೋಗುವ ವೇಳೆ ಗ್ರಾಹಕರ ಗಮನ ಬೇರೆಡೆ ಸೆಳೆದು ಬೈಕ್ ನಿಂದ ಇದೇ ಗ್ಯಾಂಗ್ 1.50 ಲಕ್ಷ ಹಣ ಎಗರಿಸಿದ್ರು. ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡದ ಕಾರ್ಯಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು‌ ಪ್ರಶಂಸೆ ವ್ಯಕ್ತಪಡಿಸಿದ್ದು, ಕೊಟ್ಟೂರು ಮತ್ತು ಹಿರೇಹಡಗಲಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Edited By : Vinayak Patil
PublicNext

PublicNext

01/02/2025 03:45 pm

Cinque Terre

15.35 K

Cinque Terre

0