ವಿಜಯನಗರ: ನೀವು ಅಂದುಕೊಂಡ ಜಾಗವನ್ನ ಬೇಗ ತಲುಪಬೇಕು ಅಂದ್ರೆ ಮನೆ ಬೇಗ ಬಿಡಬೇಕು, ಬೇಗ ಮನೆ ಬಿಟ್ರೆ ಅಪಘಾತಗಳು ತಪ್ಪಿಸಬಹುದು, ಜೀವ ಉಳಿಸಬಹುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದ್ರು.
ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇವತ್ತು ದೊಡ್ಡ - ದೊಡ್ಡ ಅಧಿಕಾರಿಗಳು ಮೊದಲು ನಿಯಮ ಪಾಲನೆ ಮಾಡಿ, ಆ ಬಳಿಕ ಜನ ಸಾಮಾನ್ಯರಿಗೆ ಹೇಳಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ರು. ರಸ್ತೆಯಲ್ಲಿ ಚಾಲನೆ ಮಾಡುವ ವೇಳೆ ಇಂತಹದ್ದೇ ನಿಯಮ ಪಾಲನೆ ಮಾಡಬೇಕು ಅನ್ನೋ ನಿಯಮ ಬಿಟ್ಟು ಸವಾರರು ಬೇಕಾಬಿಟ್ಟಿ ವಾಹನ ಚಲಾಯಿಸಿ ಅಪಘಾತ ಮಾಡಿಕೊಳ್ತಾರೆ. ಅದು ಆಗಬಾರದು ಅಂತ ವಿಜಯನಗರ ಜಿಲ್ಲೆಯ RTO ವಸಂತ್ ಚೌಹಾಣ್ ಹೇಳಿದ್ರು.
Kshetra Samachara
01/02/2025 01:21 pm