ಹೊಸಪೇಟೆ : ಏಕಾಏಕಿ ಕೆಲಸದಿಂದ ಸಿಬ್ಬಂದಿಯನ್ನ ಬಿಎಂಎಂ ಕಂಪನಿ ಟರ್ಮಿನೆಟ್ ಮಾಡಿದೆ. ಇದರಿಂದ ರೊಚ್ಚಿಗೆದ್ದ ಬಂಜಾರ ಸಮಾಜ ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದೆ.
ಬಿಎಂಎಂ ಕಂಪನಿ ಭಾರತದಲ್ಲಿದೆಯೋ.? ಪಾಕಿಸ್ತಾನದಲ್ಲಿಯೋ..? ಅಂತ ಪ್ರತಿಭಟನಾನಿರತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಕಂಪನಿಗೆ ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಕಂಪನಿ ಸೆಕ್ಯುರಿಟಿ ಗಾರ್ಡ್, ಬಂದೋಬಸ್ತ್ ಕೈಗೊಂಡಿದ್ದರು. ಇದೆಲ್ಲ ದೃಶ್ಯ ಕಂಡುಬಂದಿದ್ದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯಿರೋ ಬಿಎಂಎಂ ಕಂಪನಿ ಮುಂಭಾಗ. ಬಿಎಂಎಂ ಕಂಪನಿ ಹೇಳದೇ, ಕೇಳದೇ ತನ್ನ ಸಿಬ್ಬಂದಿಯನ್ನ ಕೆಲಸದಿಂದ ವಜಾ ಮಾಡಿದ್ದಾರೆ ಅಂತ ಆರೋಪಿಸಿ ಬಂಜಾರ ಸಮಾಜದ ಜನರು ಬಿಎಂಎಂ ಕಂಪನಿ ವಿರುದ್ಧ ಗುಡುಗಿದರು.
ಬಿಎಂಎಂ ಕಂಪನಿ ಹೊಸಪೇಟೆ ತಾಲೂಕಿನಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಆದರೆ ಬಿಎಂಎಂ ಕಂಪನಿ ಸುಸುವ ಧೂಳು, ಕೆಟ್ಟ ಹೊಗೆ ಜನರ ಆರೋಗ್ಯ ಹಾಳು ಮಾಡೋದ್ರ ಜೊತೆಗೆ ನೆಮ್ಮದಿಗೆ ಕನ್ನ ಇಟ್ಟಿದೆ. ಕಂಪನಿ ಕಾಂಪೌಂಡ್‌ಗೆ ಹೊಂದಿಕೊಂಡ ಗುಂಡಾ ಗ್ರಾಮ, ತಾಂಡಾ, ಮರಿಯಮ್ಮನಹಳ್ಳಿ, ಡಣಾಪೂರ ಗ್ರಾಮಸ್ಥರು ಅಕ್ಷರಶ ನರಕ ಅನುಭವಿಸ್ತಿದ್ದಾರೆ. ಇದ್ರಿಂದ ಜನರಿಗೆ ಅಸ್ತಮಾ, ಉಸಿರಾಟ ಸಮಸ್ಯೆ ಸೇರಿ ಹತ್ತಾರು ಕಾಯಿಲೆಗಳಿಗೆ ಜನ ತುತ್ತಾಗ್ತಿದ್ದಾರೆ. ಇದ್ರ ಮಧ್ಯೆ ಕಂಪನಿ ಶುರು ಮಾಡೋದಕ್ಕೂ ಮೊದಲು ಕೆಲವು ಗ್ರಾಮಗಳನ್ನ ಶಿಫ್ಟ್, ಅವರಿಗೆ ಪುನರ್ವಸತಿ ಕಲ್ಪಿಸಿಕೊಡ್ತೀವಿ ಅಂತ ಭರವಸೆ ನೀಡಿತ್ತು. ಆದರೆ ಈಗ ಹತ್ತಾರು ವರ್ಷಗಳೇ ಉರುಳಿದರೂ ಬಿಎಂಎಂ ಕಂಪನಿ ಮಾತ್ರ ಜನರಿಗೆ ಕೊಟ್ಟ ಭರವಸೆಯನ್ನ ಇಡೇರಿಸಿಯೇ ಇಲ್ಲ ಜನ ಆಕ್ರೋಶ ಹೊರಹಾಕಿದ್ರು.
ಒಟ್ಟಿನಲ್ಲಿ, ಬಿಎಂಎಂ ವಿರುದ್ಧದ ಸ್ಥಳೀಯರು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಿಎಂಎಂ ಕಂಪನಿ ಜನರ ಬೇಡಿಕೆ ಇಡೇರಿಸುತ್ತಾ ಕಾದು ನೋಡಬೇಕು.
ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ
PublicNext
05/02/2025 12:01 pm