ವಿಜಯನಗರ: 2024 ಆಗಸ್ಟ್ 1ರಂದು ಭಾರತ ಸರ್ವೋಚ್ಚ ನ್ಯಾಯಾಲಯ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದೆ. ಆದ್ರೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ. ಅದೆಲ್ಲವನ್ನೂ ಬದಿಗೊತ್ತಿ ಒಳಮೀಸಲಾತಿಯನ್ನ ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಅಂತ ಮಾದಿಗ - ಸಮಗಾರ - ಡೋಹರ - ಮಚಗಾರ - ದಕ್ಕಲಿಗ ಜಾತಿ ಸಂಘಟನೆಗಳ ಒಕ್ಕೂಟದ ಸದಸ್ಯ ಹಾಗೂ ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಆಗ್ರಹಿಸಿದ್ರು.
ಹೊಸಪೇಟೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ರೆ ಒಂದೇ ದಿನದಲ್ಲಿ ಒಳಮೀಸಲಾತಿ ಜಾರಿ ಆಗುತ್ತದೆ. ಆದ್ರೆ ಒಳಮೀಸಲಾತಿ ವಿರೋಧಿಗಳ ಪ್ರಭಾವಕ್ಕೆ ಒಳಪಟ್ಟು ಜಾರಿ ಮಾಡೋದಕ್ಕೆ ಸರ್ಕಾರದಿಂದ ಆಗ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ರು.
ಒಳ ಮೀಸಲಾತಿ ಹೋರಾಟಕ್ಕೆ 35 ವರ್ಷಗಳ ಅವಿರತ ಹೋರಾಟದ ಶ್ರಮ ಇದೆ. ಸರ್ವೋಚ್ಚ ನ್ಯಾಯಾಲಯ ನಮ್ಮ ಹೋರಾಟಕ್ಕೆ ನ್ಯಾಯ ಕೊಟ್ಟಿದೆ. ಆದ್ರೆ ನಮ್ಮನ್ನಾಳುವ ಸರ್ಕಾರಗಳು ನ್ಯಾಯಾಲಯದ ಆದೇಶ ಧಿಕ್ಕರಿಸಿ ನಡೆದುಕೊಳ್ತಿವೆ. ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸುತ್ತೇವೆ ಅಂತ ಹೇಳಿದ್ರು.
ಅ.28ಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಂದೇ ತಿಂಗಳಲ್ಲಿ ಒಳಮೀಸಲಾತಿ ಜಾರಿ ಮಾಡೋದಾಗಿ ಹೇಳಿತ್ತು. ಆದ್ರೀಗ ಎರಡು ತಿಂಗಳು ಕಳೆದ್ರೂ ಒಳಮೀಸಲಾತಿ ಜಾರಿ ಮಾಡ್ತಿಲ್ಲ. ಹೀಗಾಗಿ ಸರ್ಕಾರದ ನಡೆಯನ್ನ ಖಂಡಿಸುತ್ತೇವೆ ಅಂತ ಬಲ್ಲಾಹುಣ್ಸಿ ರಾಮಣ್ಣ ಆಗ್ರಹಿಸಿದ್ರು.
PublicNext
01/02/2025 12:45 pm