ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಕೆ.ಬಿ ಹಿರೇಮಠ ಸೇರಿ ಕೆಲವು ನಕಲಿ ಪತ್ರಕರ್ತರ ಹಾವಳಿ ಮಿತಿಮೀರಿದೆ. ಹೀಗಾಗಿ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದ್ದ ಜಿಲ್ಲಾಧಿಕಾರಿ, ದಿವಾಕರ್ ನಿಷ್ಕ್ರಿಯಗೊಂಡಿದೆ ಅಂತ ವಿಜಯನಗರ ಜಿಲ್ಲಾ ಕಾನಿಪ ಸಂಘ ಆರೋಪಿಸಿದೆ.
ಜಿಲ್ಲಾಕೇಂದ್ರದಲ್ಲಿ ಕಾರ್ಯನಿರತ ಪತ್ರಕರ್ತರು ಮುಕ್ತವಾಗಿ ಕಾರ್ಯನಿರ್ವಹಿಸುವುದು ಕಷ್ಟ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ, ನಕಲಿ ಪತ್ರಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಈ ಕುರಿತು ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸರ್ಕಾರಿ, ಸಂಘ, ಸಂಸ್ಥೆಗಳ ಕಾರ್ಯಕ್ರಮದಲ್ಲೂ ನಕಲಿ ಪತ್ರಕರ್ತರು ಮುಂಚೂಣಿಯಲ್ಲಿದ್ದು, ಮುದ್ರಣ, ದೃಶ್ಯ ಮಾದ್ಯಮದ ವರದಿಗಾರರ ಕೆಲಸ-ಕಾರ್ಯಗಳಿಗೆ ಅಡ್ಡಿ ಮಾಡ್ತಿದ್ದಾರೆ. ನಕಲಿ ಪತ್ರಕರ್ತರನ್ನು ಪ್ರಶ್ನಿಸುವ ನೈಜ ಪತ್ರಕರ್ತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವ ಹುನ್ನಾರ ನಡೆದಿದೆ. ಅದಕ್ಕೆ ಕಡಿವಾಣ ಹಾಕಬೇಕು ಅಂತ ಕಾನಿಪ ಸಂಘ ಆಗ್ರಹಿಸಿದೆ.
ಜನವರಿ ೨೭ರಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕೃತ ಪತ್ರಕರ್ತರು ಮಾತ್ರ ಸಭೆಯಲ್ಲಿರುವಂತೆ ಸಚಿವರು ಸೂಚಿಸಿದಾಗಲೂ, ಕೆಲ ನಕಲಿ ಪತ್ರಕರ್ತರು ಸಭೆಯುದ್ದಕ್ಕೂ ವಿಡಿಯೋ ಮಾಡುತ್ತಾ ತಿರುಗಾಡುತ್ತಿದ್ದರೂ ಡಿಸಿ ದಿವಾಕರ್ ಅವನ ಬಗ್ಗೆ ಚಕಾರವೆತ್ತಲಿಲ್ಲ.
ಕೆ.ಬಿ.ಹಿರೇಮಠ ಅನ್ನೋ ನಕಲಿ ಪತ್ರಕರ್ತ ಅಧಿಕಾರಿಗಳು, ಪತ್ರಕರ್ತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿಯಾಗಿ ಪೋಸ್ಟ್ ಮಾಡಿ, ತ್ಯೇಜೋವಧೆ ಮಾಡುತ್ತಿದ್ದಾನೆ. ಕೆ.ಬಿ.ಹಿರೇಮಠ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ, ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಇತ್ತೀಚಿನ ನಡೆಗಳು ಪರೋಕ್ಷವಾಗಿ ನಕಲ ಪತ್ರಕರ್ತರಿಗೆ ಪ್ರೋತ್ಸಾಹಿಸುವಂತಿವೆ.
ಪತ್ರಿಕಾ ಭವನದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕೆ.ಬಿ.ಹಿರೇಮಠ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ಹಲವು ಆಕ್ಷೇಪಾರ್ಹ ಪೋಸ್ಟ್ ಹಾಕಿರುವುದನ್ನು ಪರಿಶೀಲಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ವಿಚಾರದಲ್ಲಿ ತಾವು ಮೀನಮೇಷ ಎಣಿಸಿದರೆ, ಮುಂದಿನ ನಿಮ್ಮೆಲ್ಲ ಸರ್ಕಾರಿ ಸಭೆ-ಸಮಾರಂಭ ಸೇರಿದಂತೆ, ಹಂಪಿ ಉತ್ಸವದಲ್ಲಿ ನೈಜ ಪತ್ರಕರ್ತರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರು ಪತ್ರಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Kshetra Samachara
30/01/2025 08:13 pm