ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : 25 ವಿವಿಧ ಕಂಪನಿಗಳ ಸ್ಮಾರ್ಟ್ ಫೋನ್ ಖಾಕಿ ವಶಕ್ಕೆ

ವಿಜಯನಗರ : ಜಿಲ್ಲೆಯ ಕೊಟ್ಟೂರು ತಾಲೂಕಿನ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಕಳ್ಳತನ ಆಗಿದ್ದ ಐದು ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಗಳ ಮೊಬೈಲ್ ಗಳನ್ನ ಜಪ್ತಿ ಮಾಡಿದ್ದಾರೆ.

ಕಳೆದ ಐದಾರು ತಿಂಗಳ ಹಿಂದೆ ಕೊಟ್ಟೂರು ತಾಲೂಕಿನಲ್ಲಿ ಹತ್ತಾರು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿದ್ವು. ಕೇಸ್ ದಾಖಲಿಸಿಕೊಂಡು ಪತ್ತೆ ಕಾರ್ಯಕ್ಕೆ ಇಳಿದಿದ್ದ ಪೊಲೀಸರು ಮೊಬೈಲ್ ಗಳನ್ನ ಜಪ್ತಿ ಮಾಡಿದ್ದಾರೆ.

ಜಪ್ತಿ ಆದ ಮೊಬೈಲ್ ಗಳನ್ನ ಮೂಲ ಮಾಲೀಕರನ್ನ ಕರೆಸಿ ವಾಪಸ್ ಕೊಟ್ಟಿದ್ದಾರೆ. ಕಳೆದು ಹೋಗಿದ್ದ ಮೊಬೈಲ್ ಗಳು ಮರಳಿ ಸಿಕ್ಕಿದ್ದಕ್ಕೆ ಖುಷಿಯಿಂದಲೇ ಮನೆಗೆ ತೆರಳಿದ್ರು.

Edited By : Abhishek Kamoji
PublicNext

PublicNext

31/01/2025 01:52 pm

Cinque Terre

17.6 K

Cinque Terre

0