ವಿಜಯನಗರ: ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಜನರಿಗೆ ಕೋಟಿ, ಕೋಟಿ ವಂಚಿಸಿರೋ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ಬಡವರಿಂದ ಹಣ ದುಪ್ಪಟ್ಟು ಹೆಸರಿನಲ್ಲಿ ಹಣ ಪಡೆದು ಮಮತಾಜ್ ಬೇಗಂ ಅನ್ನೋ ವಂಚಕಿ ಪರಾರಿ ಆಗಿದ್ದಾಳೆ.
ಮಮತಾಜ್ಳ ಮೋಸದ ಮಾತಿಗೆ ಮರುಳಾಗಿ ಹಣ ಹೂಡಿಕೆ ಮಾಡಿ ಮನೆ ಮಠ ಮಾರಿ ಬೀದಿಗೆ ಬೀಳುವ ಪರಿಸ್ಥಿತಿಯನ್ನ ಜನರು ತಂದುಕೊಂಡಿದ್ದಾರೆ. ಹೊಸಪೇಟೆ ಮೂಲದವಳಾಗಿರೋ ಮಮ್ತಾಜ್ ಬೇಗಂ ಆ್ಯಂಡ್ ಸಹೋದರ, ಸಹೋದರಿ ಕುಟುಂಬಸ್ಥರ ಟೀಂ ನಿಂದ ವಂಚನೆ ನಡೆದಿದೆ. ಷೇರು ಮಾರುಕಟ್ಟೆ, ಗೋಲ್ಡ್, ಪೆಟ್ರೋಲ್ ಬಂಕ್, ಟೂರ್ಸ್ ಆಂಡ್ ಟ್ರಾವೆಲ್ಸ್, ಪೈಪ್ ಫ್ಯಾಕ್ಟರಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ಮಾಡಿಕೊಡ್ತೀವಿ ಅಂತಾ ಹಣ ಕಟ್ಟಿಸಿಕೊಂಡು ವರ್ಷಾನುಗಟ್ಟಲೆ ಕಳೆದಿದೆ. ಆದ್ರೆ ಹಣ ವಾಪಸ್ ಕೊಡದೇ ಮುಮ್ತಾಜ್ ಬೇಗಂ ವಂಚನೆ ಮಾಡಿ ಪರಾರಿ ಆಗಿದ್ದಾಳೆ. ಒಬ್ಬೊಬ್ಬರಿಂದ 2, 5, 10, 30 ಹೀಗೆ ಲಕ್ಷ ಲಕ್ಷಗಟ್ಟಲೇ ನೂರಾರು ಜನರಿಂದ ನೂರು ಕೋಟಿಗೂ ಅಧಿಕ ಹಣ ಕಟ್ಟಿಸಿಕೊಂಡು ವಂಚಿಸಿದ್ದಾಳೆ ಅಂತ ಹಣ ಕಳೆದುಕೊಂಡವರೇ ಆರೋಪ ಮಾಡ್ತಿದ್ದಾರೆ. ಜೊತೆಗೆ ಹಣ ಕಳೆದುಕೊಂಡವರು ವಾಪಾಸ್ ಕೊಡಿ ಅಂತ ಕೇಳಿದ್ರೆ ಮಮ್ತಾಜ್ ಆ್ಯಂಡ್ ಟೀಂ ದಬ್ಬಾಳಿಕೆ ನಡೆಸ್ತಿದೆ ಅಂತೆ.
ಹೊಸಪೇಟೆ ನಿವಾಸಿ ಅನೀಸ್ ಎಂಬವರಿಗೆ ಮಮ್ತಾಜ್ ಟೀಂ 1 ಕೋಟಿಗೂ ಅಧಿಕ ವಂಚನೆ ಮಾಡಿದೆ. ಒಂದು ಕೋಟಿ ಹಣ ಕಳೆದುಕೊಂಡ ಅನೀಸ್ ಅನ್ನೋರ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ವಂಚಕಿ ಮಮ್ತಾಜ್ ಬೇಗಂ ಆಂಡ್ ಟೀಂ ಮೇಲೆ ಪ್ರಕರಣ ದಾಖಲಾಗಿದೆ.
PublicNext
05/02/2025 12:27 pm