", "articleSection": "Crime,Cinema", "image": { "@type": "ImageObject", "url": "https://prod.cdn.publicnext.com/s3fs-public/286525-1738334938-WhatsApp-Image-2025-01-31-at-8.18.34-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ; ತುಂಗಭದ್ರ ನದಿ ತೀರದಲ್ಲಿ ನೀರು ನಾಯಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿದ ಜಾಗದಲ್ಲಿ ಅನುಮತಿ ಪಡೆಯದೇ ಕಲ್ಟ್ ಚಿತ್ರತಂಡ ಬೆಂಕಿ ...Read more" } ", "keywords": "Vijayanagara, Restricted Area, Fire Stunt, Film Shooting, Cult Movie, Protest Against Film Crew, Karnataka News, Vijayanagara News, Film Controversy, Heritage Site, Unauthorized Filming.,Crime,Cinema", "url": "https://publicnext.com/node" }
ವಿಜಯನಗರ; ತುಂಗಭದ್ರ ನದಿ ತೀರದಲ್ಲಿ ನೀರು ನಾಯಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿದ ಜಾಗದಲ್ಲಿ ಅನುಮತಿ ಪಡೆಯದೇ ಕಲ್ಟ್ ಚಿತ್ರತಂಡ ಬೆಂಕಿ ಹಚ್ಚಿ ಚಿತ್ರೀಕರಣ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಹಂಪಿಯ ಸ್ನಾನಘಟ್ಟದ ಬಳಿ ನಡೆದಿದೆ. ಕಲ್ಟ್ ಚಿತ್ರತಂಡದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣ ಆಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್, ನಟಿ ರಚಿತಾ ರಾಮ್ ನಟನೆಯ ಸಿನಿಮಾ ಇದಾಗಿದ್ದು, ಕಳೆದ ಮೂರ್ನಾಲ್ಕು ದಿನದಿಂದ ಹಂಪಿಯಲ್ಲಿ ಚಿತ್ರತಂಡ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ.
ಅಷ್ಟೇ ಅಲ್ಲದೇ ಹಂಪಿಯ ವಿರೂಪಾಕ್ಷೇಶ್ವರ ದೇಗುಲ ಬಳಿಯ ಸ್ನಾನಘಟ್ಟ ಹಾಗೂ ವಿರುಪಾಪುರ ಗಡ್ಡಿ ಸಮೀಪದಲ್ಲಿ ಬೆಂಕಿ ಹಾಕಿ ಶೂಟಿಂಗ್ ಮಾಡಲಾಗಿದೆ. ಬೆಂಕಿ ಹಾಕಿ ಕಲ್ಟ್ ಚಿತ್ರತಂಡ ಶೂಟಿಂಗ್ ಮಾಡಿದ್ರೂ ಅರಣ್ಯ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಅಂತ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ವನ್ಯಜೀವಿ ಹಾಗೂ ಪ್ರೇಮಿಗಳು ಕಲ್ಟ್ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
PublicNext
31/01/2025 08:19 pm