ಕಾರವಾರ: ಆಹಾರ ಹುಡುಕಿಕೊಂಡು ಬಂದಿದ್ದ ನಾಗರ ಹಾವೊಂದು ಶಾಲೆಯ ಅಡುಗೆ ಕೋಣೆ ಸೇರಿಕೊಂಡು ಶಿಕ್ಷಕರು, ವಿದ್ಯಾರ್ಥಿಗಳನ್ನ ಭಯಭೀತಗೊಳಿಸಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅಡುಗೆ ಕೋಣೆಯಲ್ಲಿ ನಾಗರಹಾವು ಇರುವುದನ್ನು ಕಂಡು ಆತಂಕಗೊಂಡ ಬಿಸಿಯೂಟದ ಸಿಬ್ಬಂದಿ ಹಾಗೂ ಶಿಕ್ಷಕರು, ತಕ್ಷಣ ಮಾಹಿತಿಯನ್ನ ಗ್ರಾಮ ಪಂಚಾಯತಿ ಸದಸ್ಯ ಸುಭಾಷ್ ನಾಯ್ಕ ಅವರಿಗೆ ತಿಳಿಸಿದ್ದಾರೆ.
ಅವರು ಉರಗಪ್ರೇಮಿ ಮಹೇಶ್ ನಾಯಕರನ್ನ ಸ್ಥಳಕ್ಕೆ ಕರೆ ತಂದಿದ್ದು, ಅಡುಗೆ ಕೋಣೆ ಸೇರಿದ್ದ ನಾಗರಹಾವನ್ನು ಮಹೇಶ್ ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಚೀಲದಲ್ಲಿ ತುಂಬಿ ಸುರಕ್ಷಿತವಾಗಿ ಕೊಂಡೊಯ್ದು ಕಾಡಿಗೆ ಬಿಡಲಾಗಿದ್ದು, ಆ ಮೂಲನ ಭಯಭೀತರಾಗಿದ್ದ ವಿದ್ಯಾರ್ಥಿಗಳು, ಶಿಕ್ಷಕರು ನಿರಾಳರಾಗಿದ್ದಾರೆ.
PublicNext
28/09/2022 07:25 pm