ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕೈಗಾದ ಸೈಟ್ ಡೈರೆಕ್ಟರಾಗಿ ಕನ್ನಡಿಗ ಪ್ರಮೋದ ರಾಯಚೂರ ನೇಮಕ

ಕಾರವಾರ (ಉತ್ತರ ಕನ್ನಡ): ತಾಲೂಕಿನ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ 9ನೇ ಸ್ಥಳ ನಿರ್ದೇಶಕರಾಗಿ ಕನ್ನಡಿಗ ಪ್ರಮೋದ ರಾಯಚೂರ ನಿಯುಕ್ತಿಗೊಂಡಿದ್ದಾರೆ.

ಪ್ರಸ್ತುತ ಕೇಂದ್ರದ 1 ಮತ್ತು 2ನೇ ಘಟಕಗಳ ಸ್ಥಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಕೈಗಾ ಸೇರಿದಂತೆ ದೇಶದ ವಿವಿಧ ಅಣು ವಿದ್ಯುತ್ ಘಟಕಗಳಲ್ಲಿ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೈಗಾದಲ್ಲಿ ಪ್ರಸ್ತುತ 220 ಮೆ.ವ್ಯಾ. ಸಾಮರ್ಥ್ಯದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, 700 ಮೆ.ವ್ಯಾ. ಸಾಮರ್ಥ್ಯದ ಮತ್ತೆರಡು ಘಟಕಗಳು ನಿರ್ಮಾಣಗೊಳ್ಳುತ್ತಿವೆ.

Edited By : Vijay Kumar
PublicNext

PublicNext

01/10/2022 10:20 pm

Cinque Terre

20.45 K

Cinque Terre

2

ಸಂಬಂಧಿತ ಸುದ್ದಿ