ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಶಾಂತತಾ ಭಂಗ ತರುವ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ; ಮೂವರು ಪಿಎಫ್‌ಐ ಕಾರ್ಯಕರ್ತರು ಪೊಲೀಸರ ವಶಕ್ಕೆ

ಕಾರವಾರ (ಉತ್ತರಕನ್ನಡ): ಕೋಮುಸೌಹಾರ್ದತೆಗೆ ಧಕ್ಕೆ, ಶಾಂತತಾ ಭಂಗ ತರುವ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯ ಮೇರೆಗೆ ಶಿರಸಿ ಪಟ್ಟಣದಲ್ಲಿ ಮತ್ತೆ ಮೂವರು ಪಿಎಫ್‌ಐ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿಗೆ ಬಂಧಿತನಾಗಿದ್ದ ಟಿಪ್ಪು ನಗರದ ಅಬ್ದುಲ್ ಅಜೀಜ್ ಶುಕೂರ್‌ನ ಸಹೋದರ ಅಬ್ದುಲ್ ರಜಾಕ್, ಅತಾವುಲ್ಲ ತಡಸ್ ಹಾಗೂ ಕೆರೆಕೊಪ್ಪದ ಇಮಾಮ್ ಸಾಬ್ ಪೊಲೀಸರ ವಶದಲ್ಲಿರುವವರು. ಇವರು ಅಪರಾಧಿಕ ಕೃತ್ಯಕ್ಕೆ ಜನರನ್ನ ಸೇರಿಸುತ್ತಿರುವುದು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ ಎಂದು ಅರಿತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯುಳ್ಳ ಜನರನ್ನ ಕೆರಳಿಸುವ ಮತ್ತು ಕೋಮು ಸೌಹಾರ್ತೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇವರನ್ನ ವಶಕ್ಕೆ ಪಡೆದ ಪೊಲೀಸರು, ತಹಶೀಲ್ದಾರರ ಎದುರು ಹಾಜರುಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಡಿಜೆಹಳ್ಳಿ, ಕೆಜೆಹಳ್ಳಿ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಮಾಹಿತಿಯಾಧಾರದಲ್ಲಿ ಈರ್ವರನ್ನು ವಶಕ್ಕೆ ಪಡೆಯಲಾಗಿತ್ತು.

Edited By : Nagaraj Tulugeri
PublicNext

PublicNext

27/09/2022 10:17 pm

Cinque Terre

16.48 K

Cinque Terre

2

ಸಂಬಂಧಿತ ಸುದ್ದಿ