ಬೈಂದೂರು: ನಾವುಂದ ಬಾಲಕ-ಬಾಲಕಿಯರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ. ಪದವಿಪೂರ್ವ ಶಿಕ್ಷಣ ಇಲಾಖೆ ಇದರ ವತಿಯಿಂದ ಬೈಂದೂರು ತಾಲೂಕು ಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ರಾಜಶೇಖರ್ ನಾವುಂದ ವಕೀಲರು ಪಂದ್ಯಾಟವನ್ನು ಉದ್ಘಾಟಿಸಿ ಚಾಲನೆ ನೀಡಿದರು. .
ತಾಲೂಕಿನ ವಿವಿಧ ಕಾಲೇಜಿನ 100ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳು ಮುಂದೆ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.
ಈ ವೇಳೆ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಗೋಪಾಲಕೃಷ್ಣ ನಾಡ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ನಾವುಂದ ಕಾಲೇಜಿನ ಕ್ರೀಡಾಪಟುಗಳಿಗೆ ಕಾಲೇಜು ವತಿಯಿಂದ ಸಮವಸ್ತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜೀವನ್ ಕುಮಾರ್ ಶೆಟ್ಟಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಗಣೇಶ್ ಎಮ್. ಕಾಲೇಜಿನ ಉಪ ಪ್ರಾಂಶುಪಾಲರು ಶಶಿಕಲಾ ನಾಯಕ್. ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು. ಗ್ರಾಮ ಪಂಚಾಯತ್ ಸದಸ್ಯರು ರಾಜೇಶ. ಸುಕೇಶ್ ಶೆಟ್ಟಿ ಬೈಂದೂರು ವಲಯ ಕ್ರೀಡಾ ಸಂಯೋಜಕರು.
ಗುರುರಾಜ್ ಶೇಟ್. ಅಶೋಕ ಆಚಾರ್ಯ. ರಾಜು ದೇವಾಡಿಗ. ರತನ್ ಬಿಜೂರ್. ಹಾಗೂ ವಿವಿಧ ಕಾಲೇಜಿನ ದೈಹಿಕ ಶಿಕ್ಷಕರು. ನಾವುಂದ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರಾರ್ಥನೆ ಕಾಲೇಜು ವಿದ್ಯಾರ್ಥಿನಿ ಪ್ರತಿಮಾ ನೆರವೇರಿಸಿ. ಸ್ವಾಗತ ಭಾಷಣ ಗಣೇಶ ಎಮ್. ಸಾವಿತ್ರಿ ಎಸ್ ಗಂಗೊಳ್ಳಿ ನಿರೂಪಿಸಿದರು ಧನ್ಯವಾದ ಸಮರ್ಪಣೆ ಜೀವನ್ ಕುಮಾರ್ ಶೆಟ್ಟಿ ದೈಹಿಕ ಶಿಕ್ಷಕರು....
Kshetra Samachara
20/09/2022 09:32 am