ಬೈಂದೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸೂಪರ್ ಸ್ಪೋರ್ಟ್ಸ್ ಶೋಟೋಕನ್ ಕರಾಟೆ ಅಕಾಡೆಮಿ ಆಯೋಜಿಸಿದ್ದ ಫಸ್ಟ್ ನ್ಯಾಷನಲ್ ಕರಾಟೆ ಗ್ರಾಂಡ್ ಚಾಂಪಿಯನ್ ಶಿಪ್ 2022ರ ಕಟಾ ಮತ್ತು ಕುಮಿಟೆ ಎರಡು ವಿಭಾಗಗಳಲ್ಲಿ ನಿತಾ ಬಿಲ್ಲವ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಈಕೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಉಪ್ರಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪ ಬಿಲ್ಲವ ಮತ್ತು ಕೇಶವತಿ ದಂಪತಿ ಪುತ್ರಿ . ಕರಾಟೆ ಶಿಕ್ಷಕರಾದ ವಿಜಯ ಶೆಟ್ಟಿ ತರಬೇತಿ ನೀಡಿದ್ದಾರೆ. ಹಾಗೂ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 622 ಅಂಕಗಳನ್ನು ಗಳಿಸುವ ಮುಖೇನ ರಾಜ್ಯಮಟ್ಟದಲ್ಲಿ ನಾಲ್ಕನೆಯ ಸ್ಥಾನ ಕೂಡ ಪಡೆದಿರುತ್ತಾರೆ.
Kshetra Samachara
25/06/2022 10:24 am