ಉಡುಪಿ: ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರು ವಿಶ್ವಕರ್ಮರ ಸಾಂಪ್ರದಾಯಿಕ ಪಂಚವೃತ್ತಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕುಶಲ ಕರ್ಮಿಗಳನ್ನು ಗುರುತಿಸಿ ಗೌರವಿಸಲು ನೀಡುವ 'ಎಸ್.ಕೆ.ಜಿ.ಐ- - ಫಾಲ್ಕೆ ಪ್ರಶಸ್ತಿ' ಗೆ ಉಡುಪಿಯ ಕಡಿಯಾಳಿ ದೇವಸ್ಥಾನದಲ್ಲಿ ತಿರುಗುವ ಮುಚ್ಚಿಗೆಯ ನಿರ್ಮಾತೃ ಕಾಷ್ಠಶಿಲ್ಪಿ ಸುದರ್ಶನ ಆಚಾರ್ಯ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಸ್ವರ್ಣ ಶಿಲ್ಪ ಕ್ಷೇತ್ರದ ಸಾಧನೆಗಾಗಿ ಎಂ.ಸುಧಾಮ ಆಚಾರ್ಯ ಮಂಗಳೂರು, ಎರಕ ಶಿಲ್ಪಿ ನಾಗೇಶ್ ಆಚಾರ್ಯ ಶಂಕರಪುರ, ಆಯಸ್ ಶಿಲ್ಪಿ ಗೋಪಾಲ ಆಚಾರ್ಯ ಪುತ್ತೂರು ಮತ್ತು ಶಿಲಾ ಶಿಲ್ಪ ಕ್ಷೇತ್ರದ ವಿಶೇಷ ಸಾಧನೆಗೈದ ಶೇಷಪ್ಪ ಆಚಾರ್ಯ ಕಾರ್ಕಳ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಈ ಬಾರಿಯ ಪ್ರಶಸ್ತಿ ವಿತರಣಾ ಸಮಾರಂಭ ಸೆಪ್ಟೆಂಬರ್ 18 ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಉರ್ವ ಚರ್ಚ್ ಸೆಂಟಿನರಿ ಹಾಲ್‌ನಲ್ಲಿ ನಡೆಯಲಿದೆ.
ಪ್ರಶಸ್ತಿಯು 8,000 ರೂ ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಒಳಗೊಂಡಿರುತ್ತದೆ.
Kshetra Samachara
16/09/2022 01:22 pm