ಬ್ರಹ್ಮಾವರ: ನೀಲಾವರದ ಗುಡ್ಡೆಅಂಗಡಿಯಲ್ಲಿ "ದೇವರ ಮಕ್ಕಳು ನಾವು" ವಾಟ್ಸಪ್ ಗ್ರೂಪಿನಿಂದ ಎರಡನೇ ಯೋಜನೆಯಾಗಿ ಸಿಲ್ವಿಯಾ ಡಿಸೋಜ ಅವರಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡುವ ಕಾರ್ಯಕ್ರಮ ಅಮ್ಮುಂಜೆ ಸಂತ ಅಂತೋನಿ ಇಗರ್ಜಿಯ ಧರ್ಮಗುರು ವಂ. ಲಾರೆನ್ಸ್ ಡೇವಿಡ್ ಕ್ರಾಸ್ತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಇದೇ ಸಂದರ್ಭ ಈ ಗ್ರೂಪಿನ ಮೂರನೇ ಯೋಜನೆಯಾಗಿ ಇಪ್ಪತ್ತಕ್ಕೂ ಮಿಕ್ಕಿ ಅಶಕ್ತರಿಗೆ, ಅಂಗವಿಕಲರಿಗೆ , ಮನೋರೋಗಿಗಳಿಗೆ, ವಿಧವೆಯರಿಗೆ, ಅನಾರೋಗ್ಯ ಪೀಡಿತರಿಗೆ ಜಾತಿಧರ್ಮ ಲೆಕ್ಕಿಸದೆ ಸಹಾಯಧನ ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನೂ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಮಾಜಿ ತಾಪಂ ಸದಸ್ಯೆ ವೆರೋನಿಕಾ ಕರ್ನೇಲಿಯೋ, ನೀಲಾವರ ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಪೂಜಾರಿ, ದಾನಿ, ಹಾರಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕುಮಾರ ಸುವರ್ಣ, ಬೈಕಾಡಿ ಹಾಗೂ ಉದ್ಯಮಿ ಬೋನಿಫಾಸ್ ಮಸ್ಕರೇನ್ಹಸ್ ಹಾಜರಿದ್ದರು.
Kshetra Samachara
18/11/2020 05:41 pm