ಉಡುಪಿ: ಶ್ರೀ ಕೃಷ್ಣಮಠದಲ್ಲಿ ದೀಪಾವಳಿಯ ಪ್ರಯುಕ್ತ ತೈಲಾಭ್ಯಂಗ ಹಾಗೂ ಎಣ್ಣೆಶಾಸ್ತ್ರ ನಡೆಯಿತು. ಚಂದ್ರಶಾಲೆಯಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಮಠದ ದಿವಾನರಾದ ಲಕ್ಷ್ಮೀನಾರಯಣ ಮುಚ್ಚಿಂತಾಯರು ಎಣ್ಣೆಶಾಸ್ತ್ರ ಮಾಡಿದರು .
ನಂತರ ಕೃಷ್ಣಾಪುರ ಮಠಾಧೀಶರು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ,,ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು. ಪರ್ಯಾಯ ಮಠದ ದಿವಾನರು ಶ್ರೀಪಾದರುಗಳಿಗೆ ಮಾಲಿಕೆ ಮಂಗಳಾರತಿ ಮಾಡುವುದರೊಂದಿಗೆ ಹೊಸವಸ್ತ್ರ ಸಮರ್ಪಿಸಿದರು.
Kshetra Samachara
15/11/2020 06:51 pm