ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ದಳೆ ಮಾಂತ್ರಿಕ ಶತಾಯುಷಿ ಹಿರಿಯಡ್ಕ ಗೋಪಾಲ ರಾವ್ ಇನ್ನಿಲ್ಲ

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕದ ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101) ನಿಧನರಾದರು.

ಅತಿ ಹಿರಿಯ ಯಕ್ಷಗಾನ ಕಲಾವಿದರಾದ ಅವರು, ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಸಹಿತ ಹಲವು ಪ್ರಶಸ್ತಿ ಪುರಸ್ಕೃತರಾಗಿದ್ದರು.

ಮಾತ್ರವಲ್ಲ,ಇವರು ಏರು ಮದ್ದಳೆಯ ಅನ್ವೇಷಕ ಎಂದೇ ಚಿರಪರಿಚಿತರು.

ಅಮೆರಿಕ ಸಹಿತ ನಾನಾ ದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದ ಗೋಪಾಲ್ ರಾವ್, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿದ್ದರು. ಯಕ್ಷಗಾನ ವಿದ್ವಾಂಸೆ, ವಿದೇಶಿ ಮಹಿಳೆ ಮಾರ್ತಾ ಆಸ್ಟಿನ್ ಅವರಿಗೆ ಯಕ್ಷಗುರುವೂ ಆಗಿದ್ದರು‌.

ಯಕ್ಷಗಾನದಲ್ಲಿ ಸಂಶೋಧನೆ ಪ್ರಬಂಧ ಮಂಡಿಸಿದ ಪ್ರಥಮ ವಿದೇಶಿ ಮಹಿಳೆ ಮಾರ್ತಾ ಆಸ್ಟಿನ್ ಎಂಬುದು ಗಮನಾರ್ಹ ಸಂಗತಿ.

Edited By : Nirmala Aralikatti
Kshetra Samachara

Kshetra Samachara

17/10/2020 10:22 pm

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ