ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಳೆದೆರಡು ದಿನಗಳಿಂದ ಮಳೆಯಿಂದಾಗಿ 13 ಮನೆಗಳಿಗೆ ಹಾನಿ

ಕುಂದಾಪುರ: ಕಳೆದೆರಡು ದಿನಗಳ ಮಳೆಯಿಂದಾಗಿ ಜಿಲ್ಲೆಯಲ್ಲಿ 13 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪುರ ತಾಲೂಕು ಕೊರ್ಗಿಯ ಪ್ರಶಾಂತ ಆಚಾರಿಯವರ ಮನೆಗೆ 1.23 ಲಕ್ಷ ರೂ., ಕುಂದಾಪುರದ ಖಾರ್ವಿಯವರ ಮನೆಗೆ 1.40 ಲಕ್ಷ ರೂ., ಹಟ್ಟಿಯಂಗಡಿಯ ಯಶೋಧ ಎಂಬವರ ಮನೆಗೆ 1.13ಲಕ್ಷ ರೂ., ಯಡಾಡಿ ಮತ್ಯಾಡಿಯ ಲಕ್ಷ್ಮಿ, ಬನ್ನೂರಿನ ಜ್ಯೋತಿ, ವಡೇರಹೋಬಳಿಯ ಮೊಹಿದ್ದೀನ್ ಸಾಹೇಬ್, ಕಾವಾಡಿಯ ಮೀರಾ ಸಾಹೇಬ್, ಆಯುಬ್ ಸಾಹೇಬ್ ಹಾಗೂ ನೂರುನ್ನಿಸಾರ ಮನೆಗೆ ತಲಾ 50 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯ ಜಲಜ ಹಾಗೂ ಕಾರ್ಕಡದ ಕನಕ ದೇವಾಡಿಗರ ಮನೆಗೆ ತಲಾ 50 ಸಾವಿರ ರೂ., ಮಣೂರು ಗ್ರಾಮದ ತಮ್ಮಯ್ಯ ಪೂಜಾರಿ ಹಾಗೂ ಕಾರ್ಕಳ ತಾಲೂಕು ಮಾಳದ ಅಪ್ಪಿ ಮೇರ್ತಿ ಎಂಬವರ ಮನೆಗೆ ತಲಾ 10 ಸಾವಿರ ರೂ.ನಷ್ಟ ಸಂಭವಿಸಿದೆ. ಇಂದು ಬೆಳಿಗ್ಗಿನಿಂದಲೇ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ.

Edited By : PublicNext Desk
Kshetra Samachara

Kshetra Samachara

10/09/2022 11:57 am

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ