ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಂಗಭೂಮಿ ಕ್ಷೇತ್ರದ ಖ್ಯಾತ ಹಾಡುಗಾರ ಬಿ. ಕೃಷ್ಣ ಕಾರಂತ್ ನಿಧನ

ಉಡುಪಿ: ದೇಶದ ಪ್ರಸಿದ್ಧ ರಂಗಕರ್ಮಿ ದಿವಂಗತ ಬಿ. ವಿ. ಕಾರಂತರ ಸಹೋದರ ಬಿ. ಕೃಷ್ಣ ಕಾರಂತರು ನಿಧನರಾದರು. ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ ನ ನಿವೃತ್ತ ಉದ್ಯೋಗಿಯಾಗಿದ್ದ ಇವರು ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಹಾಡಿನ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿದ್ದವು. ರಂಗಭೂಮಿ ಉಡುಪಿಯ ಸದಸ್ಯರಾದ ಇವರು ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು.

ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದ ಇವರ ಅಗಲುವಿಕೆ ಸಂಗೀತ ಹಾಗೂ ನಾಟಕ ರಂಗಕ್ಕೆ ಅಪಾರ ನಷ್ಟ. ಮೃತರ ಅಂತಿಮ ದರ್ಶನಕ್ಕೆ ಕಿದಿಯೂರಿನಲ್ಲಿರುವ ಅವರ ಮನೆಯಲ್ಲಿ ಡಿಸೆಂಬರ್ 13ರ ಬೆಳಿಗ್ಗೆ ಸುಮಾರು 11.30 ರ ನಂತರ ಅವಕಾಶ ಕಲ್ಪಿಸಲಾಗಿದೆ. ಸಂಜೆ ಸುಮಾರು 6.30 ಕ್ಕೆ ಉಡುಪಿ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.

Edited By : PublicNext Desk
PublicNext

PublicNext

13/12/2024 08:03 am

Cinque Terre

7.17 K

Cinque Terre

1

ಸಂಬಂಧಿತ ಸುದ್ದಿ