ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುಡುಕರ ಅಡ್ಡೆ ಆಗುತ್ತಿದೆ ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿ ವಲಯ

ಮಂಗಳೂರು: ನಗರದ ಸರ್ವೀಸ್ ಬಸ್‌ನಿಲ್ದಾಣದಲ್ಲಿ‌ ಬಸ್‌ಗಳು ಹೊರಬರುವಲ್ಲಿ ಬಲಕ್ಕೆ ನೋಡಿದರೆ ಮಂಗಳೂರು ಮನಪಾ ಬೀದಿಬದಿ ವ್ಯಾಪಾರಿ ವಲಯ ದೊಡ್ಡದಾದ ಬೋರ್ಡ್ ಕಾಣುತ್ತದೆ. ಇಲ್ಲಿ ಬೋರ್ಡ್ ಹಾಕಲಾಗಿದೆಯೇ ಹೊರತು ಯಾವ ವ್ಯಾಪಾರವೂ ನಡೆಯುತ್ತಿಲ್ಲ. ಬದಲಾಗಿ ಇದು ಕುಡುಕರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಹೌದು... ಮಂಗಳೂರು ಮನಪಾ ಬೀದಿಬದಿ ವ್ಯಾಪಾರಿ ವಲಯದ ಒಳಹೊಕ್ಕರೆ ಸಾಕು ನಶೆ ಏರಿಸಿ ಮಲಗಿದವರ, ಕುಳಿತು ಧೂಮಪಾನ ಮಾಡುತ್ತಾ ಹರಟೆ ಕೊಚ್ಚುತ್ತಿರುವವರ ದರ್ಶನವಾಗುತ್ತದೆ. ಅಲ್ಲಲ್ಲಿ ಕುಡಿದು ಎಸೆದ ಬಾಟಲಿಗಳು, ಗಲೀಜು ಗಬ್ಬು ನಾರುತ್ತಿರುವ ವಾತಾವರಣ ಅಸಹ್ಯ ಹುಟ್ಟಿಸುತ್ತದೆ. ಅಲ್ಲಿಯೇ ಇಂದಿರಾ ಕ್ಯಾಂಟೀನ್ ಇದ್ದು, ಇಂತಹ ಅಸಹ್ಯಕರ ವಾತಾವರಣದಲ್ಲಿ ಅಲ್ಲಿಗೆ ಹೋಗುವವರಿಗೂ ತೊಂದರೆಯಾಗುತ್ತಿದೆ. ನಡೆದಾಡಲು ಅಸಹ್ಯ ಹುಟ್ಟಿಸುತ್ತಿದೆ. ರಾತ್ರಿಯಾದರೆ ಏನು?, ಹಗಲೇ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆದರೆ ಆಶ್ಚರ್ಯವೇನಿಲ್ಲ. ಅಷ್ಟೊಂದು ಪೋಲಿಗಳ ಅಡ್ಡವಾಗುತ್ತಿದೆ ಈ ವ್ಯಾಪಾರಿ ವಲಯ.

ಸೆ. 5ರಂದು ಮನಪಾ 93 ವ್ಯಾಪಾರಿಗಳಿಗೆ ಚೀಟಿ ಎತ್ತುವ ಮೂಲಕ ಸ್ಟಾಲ್‌ ಹಸ್ತಾಂತರಿಸಿತ್ತು. ಆದರೆ ಇಲ್ಲಿಯವರೆಗೆ ವಲಯದಲ್ಲಿ ವ್ಯಾಪಾರ ಮಾತ್ರ ಆರಂಭವಾಗಿಲ್ಲ. ವ್ಯಾಪಾರಿ ವಲಯದ ಕಾಮಗಾರಿ ಸಂಪೂರ್ಣಗೊಂಡು ಕೆಲವು ತಿಂಗಳುಗಳು ಕಳೆದಿದೆ. ಆದರೆ ತಮಗೆ ಬೇಕಾದಂತೆ ವ್ಯಾಪಾರ ನಡೆಸಲು ವ್ಯಾಪಾರಿ ವಲಯ ಸೂಕ್ತವಾಗಿಲ್ಲ ಎಂದು ವ್ಯಾಪಾರ ಆರಂಭಿಸದಿರುವುದಕ್ಕೆ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರ ನಡೆಸುವ ಸ್ಥಳ ಕನಿಷ್ಠ 4.6 ವಿಸ್ತೀರ್ಣ ಇರಬೇಕಾಗಿತ್ತು. ಅದಕ್ಕಿಂತ ಕಡಿಮೆಯಿದ್ದ ಕಾರಣ ಬಿಸಿಲು, ಮಳೆಗೆ ಇಲ್ಲಿ ವ್ಯಾಪಾರ ನಡೆಸುವುದು ಖಂಡಿತಾ ಅಸಾಧ್ಯ.

ಸದ್ಯ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ವ್ಯಾಪಾರಿ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಈ ಮೂಲಕ ಜನರ ತೆರಿಗೆ ಹಣ ಸುಖಾಸುಮ್ಮನೆ ಪೋಲಾಗುತ್ತಿದೆ‌. ಇನ್ನಾದರೂ ಪಾಲಿಕೆ ಗಮನ ಹರಿಸಿ ಇಲ್ಲಿ ವ್ಯಾಪಾರ ನಡೆಸಲು ವ್ಯವಸ್ಥೆ ಮಾಡಿ ಕೊಡಬೇಕೆಂಬುದೇ ನಮ್ಮ ಆಶಯ.

Edited By : Vinayak Patil
PublicNext

PublicNext

13/12/2024 07:21 am

Cinque Terre

9.33 K

Cinque Terre

0

ಸಂಬಂಧಿತ ಸುದ್ದಿ