ಮಲ್ಪೆ : ನಾಲ್ಕು ದಿನಗಳ ಹಿಂದೆ ಮನೆಯ ಕಪಾಟಿನಲ್ಲಿದ್ದ ನಾಗರಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಿದಿಯೂರು ಗ್ರಾಮದಲ್ಲಿ ನಡೆದಿದೆ. ಸುಧಾಕರ ಅಮೀನ್ ಮೃತ ದುರ್ದೈವಿಯಾಗಿದ್ದಾರೆ.
ಸುಧಾಕರ ಅಮೀನ್ (55) ಅವರಿಗೆ ಜೂ. 8ರಂದು ತಮ್ಮ ಮನೆಯ ಕೋಣೆಯಲ್ಲಿ ಕಪಾಟಿನ ಮೇಲೆ ಇಟ್ಟಿದ್ದ ಅಂಗಿಯನ್ನು ತೆಗೆಯಲು ಕಪಾಟಿನ ಮೇಲೆ ಇದ್ದ ನಾಗರಹಾವು ಕಚ್ಚಿತ್ತು.
ಕೂಡಲೇ ಸುಧಾಕರ ಅಮೀನ್ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜೂ. 13ರಂದು ಮಧ್ಯಾಹ್ನದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/06/2022 07:01 am