ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀ ಕೃಷ್ಣಮಠ ವತಿಯಿಂದ ಸಂತ್ರಸ್ತರಿಗೆ ಉಪಾಹಾರ, ಭೋಜನ ವ್ಯವಸ್ಥೆ

ಉಡುಪಿ: ನಿನ್ನೆ ಸಂಭವಿಸಿದ ಭಾರೀ ಮಳೆಯ ಪ್ರಭಾವದಿಂದಾಗಿ ಶ್ರೀಕೃಷ್ಣ ಮಠದ ಸುತ್ತಲಿನ ನೆರೆಪ್ರದೇಶಗಳಾದ ಕಲ್ಸಂಕ, ಪಾರ್ಕಿಂಗ್ ಏರಿಯಾ ಮತ್ತು ಬೈಲಕೆರೆಗಳಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಮಠದ ವ್ಯವಸ್ಥಾಪಕ ಗೋವಿಂದರಾಜ್ ಮತ್ತು ಸ್ಥಳೀಯ ಉದ್ಯಮಿ ಹರೀಶ್ ಬೈಲಕೆರೆಯವರೊಂದಿಗೆ ಮನೆ-ಮನೆಗೆ ತೆರಳಿ, ಸಂತ್ತಸ್ತರ ಯೋಗಕ್ಷೇಮ ವಿಚಾರಿಸಿ, ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಮಾಡಲಾಯಿತು.

ಇದಲ್ಲದೆ ,ಮಧ್ಯಾಹ್ನ ಎಲ್ಲಾ ಮನೆಗಳಿಗೆ ಜ್ವರ ನಿರೋಧಕ ಕಷಾಯ ವಿತರಿಸಲಾಯಿತು. ಹಾಗೆಯೇ ಮಧ್ಯಾಹ್ನದ ಭೋಜನವನ್ನು ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಠದ ವತಿಯಿಂದ ಮಾಡಲಾಗಿದೆ.

ಸಂತ್ರಸ್ತರು ಅಪೇಕ್ಷಿಸಿದರೆ ಸಾಯಂಕಾಲದ ಭೋಜನ ಮಠದಿಂದ ನೀಡಲಾಗುವುದು. ಸ್ಥಳೀಯರು ಸುರಕ್ಷಿತರಾಗಿರಬೇಕೆನ್ನುವ ಶ್ರೀಪಾದರ ಆಶಯದಂತೆ ಈ ಎಲ್ಲಾ ಸೇವಾ ಕಾರ್ಯಗಳನ್ನು ಶ್ರೀ ಮಠ ಮಾಡುತ್ತಿದೆ.

Edited By : Nirmala Aralikatti
Kshetra Samachara

Kshetra Samachara

21/09/2020 01:09 pm

Cinque Terre

9.89 K

Cinque Terre

0

ಸಂಬಂಧಿತ ಸುದ್ದಿ