ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಮೂಡುತೋಟ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ದಲ್ಲಿ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಪ್ರಾತಃಕಾಲ ಚಪ್ಪರ ಮುಹೂರ್ತ ನಡೆಯಿತು ಸಂಜೆ 3 ಗಂಟೆಗೆ ಚಪ್ಪರ ಏರುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಜೆ 6.30 ಗಂಟೆಗೆ ಪುನೋಡಿ ಭಂಡಾರ ಮನೆಯಿಂದ ಪಡುಪಣಂಬೂರು ಅರಮನೆಗೆ ದೈವಗಳ ಭಂಡಾರ ಹೊರಟು ದೈವಸ್ಥಾನಕ್ಕೆ ರಾತ್ರಿ 8ಗಂಟೆಗೆ ಆಗಮನವಾಯಿತು.
ರಾತ್ರಿ ಅನ್ನಸಂತರ್ಪಣೆ ನಡೆದು ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳ ರೀತಿಯಲ್ಲಿ ನಡೆಯಿತು.
ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮಾಜೀ ಸಚಿವ ಅಭಯಚಂದ್ರ ಜೈನ್, ಮುಂಬಯಿ ಬಂಟರ ಸಂಘದ ಮಾಜೀ ಅಧ್ಯಕ್ಷ ಭುಜಂಗ ಶೆಟ್ಟಿ ಉತ್ರಂಜೆ, ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪ್ರಸಾದ್ ಪಡುಪಣಂಬೂರು, ಕೊಲ್ನಾಡುಗುತ್ತು ಕಿರಣ್ ಶೆಟ್ಟಿ ಮತ್ತಿತರರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ದೈವಸ್ಥಾನ ಸಮಿತಿ ಅಧ್ಯಕ್ಷರಾದ ಅನಿಲ್ ಶ್ಯಾಮ ಶೆಟ್ಟಿ ಮೂಡು ತೋಟ, ರಮೇಶ್ ಶೆಟ್ಟಿ ಮಾಗಂದಡಿ, ಶಿವರಾಮ ಎಸ್.ಶೆಟ್ಟಿ ಬಾಳಿಕೆ ಮನೆ, ಕೋಶಾಧಿಕಾರಿ ನವೀನ್ ಕುಮಾರ್ ಬಾಂದಕೆರೆ, ಪ್ರಕಾಶ್ ಭಟ್, ಪ್ರಧಾನ ಕಾರ್ಯದರ್ಶಿ ವಿನೇಶ್ ಶೆಟ್ಟಿ ಬಾಳಿಕೆ ಮನೆ, ಗೌರವ ಸಲಹೆಗಾರರಾದ ಗೌತಮ ಜೈನ್, ಪಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಭಾನುವಾರ ಬೆಳಿಗ್ಗೆ ಧೂಮಾವತಿ ಬಂಟ ದೈವಗಳ ನೇಮೋತ್ಸವ, ಮಧ್ಯಾಹ್ನ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.
Kshetra Samachara
09/01/2022 01:00 pm