", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/418299-1737166683-pp.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ- ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ 5 ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಬಾರ್ಕೂರು ...Read more" } ", "keywords": "Brahmavar, Kachooru Jathra, Temple Festival, Karnataka Culture, Indian Tradition, Folk Dance, Colorful Procession, Udupi District.,Udupi,Mangalore,Religion", "url": "https://publicnext.com/node" }
ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ- ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ 5 ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಬಾರ್ಕೂರು ಕಲ್ಲು ಚಪ್ಪರದ ಬಳಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಎನ್. ಶಂಕರ ಪೂಜಾರಿ, ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಬಾರ್ಕೂರು, ಗ್ರಾಪಂ ಅಧ್ಯಕ್ಷ ಶಾಂತರಾಮ ಶೆಟ್ಟಿ ಚಾಲನೆ ನೀಡಿದರು.
ದೇವಳದ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು, ಅಧ್ಯಕ್ಷ ಶಿವಪ್ಪ ನಂತೂರು ಸೇರಿದಂತೆ ನಾನಾ ಭಾಗದ ಗುರಿಕಾರರು ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿಯವರು ಹೊರೆಕಾಣಿಕೆ ಮೆರವಣಿಗೆಯಲ್ಲಿದ್ದರು. ಪೂರ್ಣಕುಂಭ, ನಾನಾ ಟ್ಯಾಬ್ಲೋಗಳು, ಚಂಡೆ ವಾದನ, ನಾಸಿಕ್ ಬ್ಯಾಂಡ್ ಮೆರವಣಿಗೆಯ ಕಳೆ ಹೆಚ್ಚಿಸಿತ್ತು. ನೂರಾರು ವಾಹನಗಳಲ್ಲಿ ಹಸಿರು ಹೊರೆಕಾಣಿಕೆ ರಥಬೀದಿ ಮೂಲಕ ದೇವಸ್ಥಾನ ತಲುಪಿತು.
PublicNext
18/01/2025 07:48 am