ಮಂಗಳೂರು: ನನಗೆ ಜಾತಿ ಗಣತಿಯಲ್ಲಿ ಏನಿದೆ ಎಂದೇ ಗೊತ್ತಿಲ್ಲ. ಸುಮ್ಮಸುಮ್ಮನೆ ವಿರೋಧ ಮಾಡೋದ, ಹೇಗೆ ವಿರೋಧ ಮಾಡ್ತಾರೆ?. ನಮ್ಮ ಪಕ್ಷದಲ್ಲಿ ಜಾತಿ ಜನಗಣತಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದೀನಿ ಜನರಿಗೆ ಅದನ್ನು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾತಿ ಜನಗಣತಿ ಗೊಂದಲದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಜನಗಣತಿ ನಿನ್ನೆ ಮುಗಿಸಲಿಲ್ಲ ನೆಕ್ಸ್ಟ್ ಕ್ಯಾಬಿನೆಟ್‌ನಲ್ಲಿ ಮುಗಿಸುತ್ತೇವೆ ಎಂದು ಹೇಳಿದರು.
ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ಪೊಲೀಸರಿಗೆ ದರೋಡೆಕೋರರನ್ನು ಪತ್ತೆ ಹಚ್ಚಲು ಹೇಳಿದ್ದೇನೆ. ತಕ್ಷಣ ಪತ್ತೆ ಹಚ್ಚಿ ಶಿಕ್ಷೆ ಕೊಡಿಸಿ ಎಂದಿದ್ದೇನೆ. ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
PublicNext
17/01/2025 10:28 pm