ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿಕಾರಿಬೆಟ್ಟು: ಒಂದೇ ಸೂರಿನಡಿಯಲ್ಲಿ ವಿವಿಧ ಸೌಲಭ್ಯಗಳ ಉಚಿತ ಶಿಬಿರ

ಮುಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮತ್ತು ಮಂಗಳೂರು ಅಂಚೆ ವಿಭಾಗ ಮತ್ತು ಗ್ರಾಮ ಒನ್‌ ಕಿಲ್ಪಾಡಿ ಸಹಭಾಗಿತ್ವದಲ್ಲಿ ಆಧಾರ್ ನಂಬರ್ ಗೆ ಮೊಬೈಲ್ ಸಂಖ್ಯೆ ಜೋಡಣೆ, ಆರ್ಥಿಕ ಸೇರ್ಪಡೆ, ಪಿ.ಎಂ. ಕಿಸಾನ್ ಲಿಂಕ್, ಅಭಾ ಆರೋಗ್ಯ ಕಾರ್ಡ್ ಉಚಿತ ಶಿಬಿರವನ್ನು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ವಿವಿಧ ಸಂಘಟನೆಗಳ ವತಿಯಿಂದ ಗ್ರಾಮಸ್ಥರಿಗೆ ಒಂದೇ ಸೂರಿ ನಡಿಯಲ್ಲಿ ಅನೇಕ ಸೌಲಭ್ಯಗಳು ಒದಗಿಸಲು ಉಚಿತ ಶಿಬಿರ ಆಯೋಜಿಸಿದ್ದು ಸದ್ದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು. ಉಪಾಧ್ಯಕ್ಷೆ ಶಶಿಕಲಾ, ಸದಸ್ಯೆ ಜ್ಯೋತಿ ಆಚಾರ್ಯ, ಐ.ಪಿ.ಪಿ.ಬಿ ಕ್ಷೇತ್ರಾಧಿಕಾರಿಯಾದ ವೆಂಕಟೇಶ್ ಪೈ, ನಾಗರಾಜ್ ಎಮ್ ಎಸ್, ಪಂಜಿನಡ್ಕ ಶಾಖಾ ಅಂಚೆ ಪಾಲಕ ಗಣೇಶ್ ಪ್ರಸಾದ್ ಮೂಲ್ಯ, ಅತಿಕಾರಿಬೆಟ್ಟು ಉಪ ಶಾಖಾ ಅಂಚೆ ಪಾಲಕ ಶರೋನ್ ಡಿಸೋಜ, ಗ್ರಾಮ ಕೇಂದ್ರದ ಅಂಬಿಕಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/09/2022 05:43 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ