ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅವ್ಯವಸ್ಥೆಗಳ ಆಗರವಾಗಿರುವ ಗೇರುಕಟ್ಟೆ ಬಳಿ ಹೆದ್ದಾರಿ ಜಂಕ್ಷನ್

ಮುಲ್ಕಿ: ಸುಮಾರು 10 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ಬಳಿ ಭರ್ಜರಿ ಸಿದ್ದತೆ ನಡೆದಿದ್ದು ಮುಲ್ಕಿ ಮೂಡಬಿದ್ದೆ ರಾಜ್ಯ ಹೆದ್ದಾರಿಯ ಗೇರುಕಟ್ಟೆ ಜಂಕ್ಷನ್ ಅವ್ಯವಸ್ಥೆಗಳ ಆಗರವಾಗಿದೆ.

ಗೇರುಕಟ್ಟೆ ಜಂಕ್ಷನ್ ವಾಹನ ನಿಬಿಡ ಪ್ರದೇಶವಾಗಿದ್ದು ಅನೇಕ ವಾಹನಗಳು ಒಳ ರಸ್ತೆಯಲ್ಲಿ ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದೆ. ಕಳೆದ ಮಳೆಗಾಲದಲ್ಲಿ ಹೆದ್ದಾರಿ ಹೊಂಡಮಯವಾಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ದಾರಿದೀಪ ಅವ್ಯವಸ್ಥೆಯಿಂದ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ಬಗ್ಗೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೂ ದುರಸ್ತಿಯಾಗಿಲ್ಲ. ಅಗಸ್ಟ್ 27ರಂದು ರಾಜ್ಯ ಸಚಿವರಾದಿಯಾಗಿ ಗಣ್ಯಾತಿಗಣ್ಯರು ಗೇರುಕಟ್ಟೆ ಬಳಿ ಆಡಳಿತ ಸೌಧದ ಶಿಲಾನ್ಯಾಸಕ್ಕೆ ಬರುತ್ತಿದ್ದು ರಸ್ತೆ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

25/08/2022 11:07 am

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ