ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ರಾಷ್ಟ್ರಧ್ವಜ ಸಾರ್ವ ಭೌಮತ್ವದ ಸಂಕೇತ: ಡಾ.ಚೂಂತಾರು

ಮಂಗಳೂರು: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ 'ಆಜಾದೀ ಕಾ ಅಮೃತ ಮಹೋತ್ಸವ' ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ವತಿಯಿಂದ ಕಚೇರಿಯಲ್ಲಿ ಗೃಹರಕ್ಷಕರಿಗೆ ರಾಷ್ಟ್ರಧ್ವಜವನ್ನು ಹಂಚುವುದರ ಮೂಲಕ ಸಾಂಕೇತಿಕವಾಗಿ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಆದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರದ ಆದೇಶದಂತೆ 'ಆಜಾದೀ ಕಾ ಅಮೃತ ಮಹೋತ್ಸವ' ದ ಅಂಗವಾಗಿ ಗೃಹರಕ್ಷಕದಳದ ಕಚೇರಿಯಲ್ಲಿ 'ಹರ್ ಘರ್ ತಿರಂಗಾ'( ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ) ಎಂಬ ಅಭಿಯಾನವನ್ನು ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಚಾಲನೆ ನೀಡಲಿದ್ದೇವೆ ಎಂದರು.

ರಾಷ್ಟ್ರಧ್ವಜವನ್ನು ಮನೆ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರಂದು ಹಾರಿಸಬೇಕು, ಅರಳಿಸಬೇಕು, ಗೌರವಿಸಬೇಕು, ರಾಷ್ಟ್ರಧ್ವಜ ಎನ್ನುವುದು ಸಾರ್ವ ಭೌಮತ್ವದ ಸಂಕೇತವಾಗಿರುತ್ತದೆ, ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಗೌರವ ಮೂಡಿಸಬೇಕು ಎಂದರು.

ರಾಷ್ಟ್ರಧ್ವಜಕ್ಕೆ ಎಲ್ಲಾ ರೀತಿಯ ಗೌರವ ನೀಡಿ ಧ್ವಜ ಸಂಹಿತೆಯ ಮಾರ್ಗದರ್ಶನದಂತೆ ನಡೆಯತಕ್ಕದ್ದು. ಪ್ರತಿ ಗೃಹರಕ್ಷಕರು ತಮ್ಮ ಮನೆಗಳಲ್ಲಿ ಮೂರು ದಿನ ರಾಷ್ಟ್ರಧ್ವಜ ಅರಳಿಸಿ, ದೇಶ ಪ್ರೇಮ ಮೆರೆಯಬೇಕು ಎಂದು ಗೃಹರಕ್ಷಕರಿಗೆ ಆದೇಶ ನೀಡಿದರು. ಮಂಗಳೂರು ಘಟಕದ ಗೃಹರಕ್ಷಕರಿಗೆ ರಾಷ್ಟ್ರಧ್ವಜ ವಿತರಿಸಲಾಯಿತು.

ಕಚೇರಿಯ ಅಧೀಕ್ಷಕ ರತ್ನಾಕರ ಎಂ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರಾ ಹಾಗೂ ಗೃಹರಕ್ಷಕರಾದ ಸುನೀಲ್, ಕೇಶವ ಶೆಟ್ಟಿಗಾರ್, ದಿಲೀಪ್, ದಿವಾಕರ್, ಕನಕಪ್ಪ, ವಿನಯ್, ಮಹೇಶ್ ಪ್ರಸಾದ್, ಸಂತೋಷ್, ಸುಲೋಚನಾ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/08/2022 05:15 pm

Cinque Terre

3.54 K

Cinque Terre

0

ಸಂಬಂಧಿತ ಸುದ್ದಿ